- ವೈವಾಹಿಕ ಮಾಹಿತಿ ಮತ್ತು ವಧೂ-ವರರ ಮುಖಾಮುಖಿ ಕಾರ್ಯಕ್ರಮ – ಹವ್ಯಕ ಮಾಂಗಲ್ಯ
- ವಿದ್ಯಾರ್ಥಿ ಪ್ರೋತ್ಸಾಹ ಧನ
- ಹವ್ಯಕ ಅಧ್ಯಯನ ಕೇಂದ್ರ
- ಹವ್ಯಕ ವಿಶೇಷ ಪ್ರಶಸ್ತಿಗಳು
- ಆರ್ತ ಸಹಾಯ ನಿಧಿ
- ವೈದಿಕ ನಿಧಿ
- ಕೃಷಿ ನಿಧಿ
- ಹವಿಗನ್ನಡ ಗ್ರಂಥಾಲಯ
- ಹವ್ಯಕ ಮಾಸ ಪತ್ರಿಕೆ, ಲೇಖನ ಪ್ರಕಾಶನ – ದಿನದರ್ಶಿಕೆ
- ವೈದ್ಯಕೀಯ ಸೇವೆ ಮತ್ತು ಶಿಬಿರಗಳು
- ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ
- ವಿದ್ಯಾರ್ಥಿ / ವಿದ್ಯಾರ್ಥಿನಿ ನಿಲಯಗಳು
- ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಲ್ಲವ ಪುರಸ್ಕಾರ
- ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರಗಳು
- ಮಹಿಳಾ ವೇದಿಕೆ
- ಯುವ ವೇದಿಕೆ
- ಸಾಂಸ್ಕೃತಿಕ ವೇದಿಕೆ ಮತ್ತು ಪ್ರತಿಬಿಂಬ
- ಕಲಾ ವೇದಿಕೆ
- ಕ್ರೀಡಾ ವೇದಿಕೆ
- ವಿವಿಧ 21 ಸಂಘಟನಾ ವೇದಿಕೆಗಳು
- ಶ್ರೀ ಸಿದ್ಧಿವಿನಾಯಕ ದೇವಳದಲ್ಲಿ ಪೂಜಾ ಕೈಂಕರ್ಯ
- ಧಾರ್ಮಿಕ ಕಾರ್ಯಕ್ರಮಗಳು ಮತ್ತು ವೇದಾಧ್ಯಯನ
- ಸಂಸ್ಕಾರೋತ್ಸವ ಕಾರ್ಯಕ್ರಮ
- ವೇದ ಸಂಸ್ಕಾರ
- ಭಾಷಾ ಸಂಸ್ಕಾರ
- ಯೋಗ ಸಂಸ್ಕಾರ
- ಗೀತಾ ಸಂಸ್ಕಾರ
- ಯಕ್ಷ ಸಂಸ್ಕಾರ
- ಗಾನ ಸಂಸ್ಕಾರ
- ಕಲಾ ಸಂಸ್ಕಾರ
- ಪಾಕ ಸಂಸ್ಕಾರ
ಸಮಾಜದಲ್ಲಿ ಸಂಘಟನೆಯ ಮಹತ್ವವನ್ನರಿತು ಸ್ವಾತಂತ್ರ ಪೂರ್ವದಲ್ಲೆ ಹವ್ಯಕ ಸಮಾಜದ ಸಂಘಟನೆಗಾಗಿ ಹವ್ಯಕರ ಸಾಮಾಜಿಕ ಸೇವಾ ಸಂಸ್ಥೆಯೊಂದನ್ನು ಸ್ಥಾಪಿಸಿದ ಹಿರಿಯರ ಆಶಯಕ್ಕನುಗುಣವಾಗಿ ಸಮಾಜಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಾಲಕಾಲಕ್ಕೆ ಅನೇಕ ಸೇವಾ ಚಟುವಟಿಕೆಗಳನ್ನು ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ) ಮುಂದುವರಿಸಿಕೊಂಡು ಬಂದಿದೆ. ಸುಮಾರು 90ರ ದಶಕದಲ್ಲಿ ಸಮಾಜದ ವಿವಾಹಾಪೇಕ್ಷಿಗಳ ಅವಶ್ಯಕತೆಯನ್ನರಿತು ಹವ್ಯಕ ಮಹಾಸಭೆಯದೇ ಆದ ವೈವಾಹಿಕ ಮಾಹಿತಿ ಕೇಂದ್ರವನ್ನು ಪ್ರಾರಂಭಿಸಲಾಯಿತು. ಇಪ್ಪತ್ತು ರೂಪಾಯಿಗಳ ನೋಂದಣಿ ಶುಲ್ಕ ನೀಡಿ ಮುದ್ರಿತ ಅರ್ಜಿ ನಮೂನೆಯಲ್ಲಿ ವಧೂ – ವರರ ಮಾಹಿತಿಯನ್ನು ಭರ್ತಿ ಮಾಡಿ ನೀಡಿದ ಮಾಹಿತಿ ಒಂದು ವರ್ಷದವರೆಗೆ ಊರ್ಜಿತದಲ್ಲಿದ್ದು ನೋಂದಣಿ ಮಾಡಿಸಿದ ಇತರ ವಧೂ – ವರರಿಗೆ ಮಾಹಿತಿ ಪರಿಶೀಲನೆಗೆ ಅವಕಾಶ ಮಾಡಿಕೊಡಲಾಯಿತು. ಪ್ರಾರಂಭದ ಕೆಲ ವರ್ಷ ತ್ರಿಮತಸ್ಥ ಬ್ರಾಹ್ಮಣರಿಗೆ ಪ್ರತ್ಯೇಕವಾಗಿ ನೋಂದಣಿಗೆ ಅವಕಾಶ ಕಲ್ಪಿಸಿದ್ದು ಮುಂದಿನ ದಿನಗಳಲ್ಲಿ ನೋಂದಾಯಿತರ ಹಿನ್ನೆಲೆ ಪರಿಶೀಲನೆಗೆ ತೊಡಕುಂಟಾದ್ದರಿಂದ ಹವ್ಯಕ ಮಹಾಸಭಾದ ಸದಸ್ಯರಿಗೆ ಮಾತ್ರ ನೋಂದಣಿಗೆ ಅವಕಾಶ ಮುಂದುವರೆಸಲಾಯಿತು.
ಇಂದಿನ ದಿನದ ಅವಶ್ಯಕತೆಗಳಿಗನುಗುಣವಾಗಿ ಜಾಲತಾಣದ ಮೂಲಕ ಹವ್ಯಕ ವೈವಾಹಿಕ ಮಾಹಿತಿ ಪರಿಶೀಲನಾ ವ್ಯವಸ್ಥೆಯನ್ನು 2009ರಲ್ಲಿ ಪ್ರಾರಂಭಿಸಿದ್ದು, 2021 ರಲ್ಲಿ ಹವ್ಯಕ ಮಾಂಗಲ್ಯ Appನ್ನು ಕೂಡ ಅಭಿವೃದ್ಧಿ ಪಡಿಸಲಾಗಿದೆ. ಪ್ರಸ್ತುತ ಹವ್ಯಕ ಮಾಂಗಲ್ಯದಲ್ಲಿ ಪ್ರತಿ ವರ್ಷ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಧೂ-ವರರ ನೋಂದಣಿ ಆಗುತ್ತಿದ್ದು, ಇಲ್ಲಿಂದ ಮಾಹಿತಿ ಪಡೆದು ಸುಮಾರು 150 – 200 ವಿವಾಹಗಳು ನಿಶ್ಚಯವಾಗುತ್ತಿರುವುದು ಹೆಮ್ಮೆಯ ವಿಚಾರ.
ಹವ್ಯಕ ವೈವಾಹಿಕ ಮಾಹಿತಿ ಕೇಂದ್ರವು ನೋಂದಾಯಿತ ವಿವಾಹಾಪೇಕ್ಷಿತ ವಧೂ-ವರರ ಮಾಹಿತಿ ಪರಿಶೀಲನೆಗೆ ಅವಕಾಶ ನೀಡುವುದರ ಜೊತೆಗೆ, ಕಾಲಕಾಲಕ್ಕೆ ಬೆಂಗಳೂರು ಹಾಗೂ ಇತರ ಕಡೆಗಳಲ್ಲಿ ಹವ್ಯಕ ವಧೂ – ವರರ ಸಮಾವೇಶಗಳನ್ನು ಆಯೋಜಿಸಿಕೊಂಡು ಬರುತ್ತಿದೆ.
ವಿದ್ಯಾರ್ಥಿ ಪ್ರೋತ್ಸಾಹ ಧನ
ಶ್ರೀ ಅಖಿಲ ಹವ್ಯಕ ಮಹಾಸಭಾವು ವಿದ್ಯಾರ್ಥಿ ವೇತನ ನಿಧಿಯಾಗಿ 1985 ರಿಂದ ಸ್ಥಾಯಿ ನಿಧಿಯೊಂದನ್ನು ಸ್ಥಾಪಿಸಿದ್ದು ನಿಧಿಯ ಬಡ್ಡಿಯನ್ನು ಪ್ರತಿ ವರ್ಷ ಅಗತ್ಯವಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತದೆ. ಪ್ರತಿ ವರ್ಷ ನಿಧಿ ಬೆಳೆಯುತ್ತಿದೆ. ಪ್ರಸ್ತುತ ವಿದ್ಯಾರ್ಥಿವೇತನ ನಿಧಿಯು 2.65 ಕೋಟಿಗಳಷ್ಟು ಬೆಳೆದಿದೆ ಮತ್ತು ಈ ವರ್ಷ (2023-24) HAA ಸಹಾಯದಿಂದ, ಮಹಾಸಭಾ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸುಮಾರು 24 ಲಕ್ಷ ರೂಪಾಯಿಗಳನ್ನು ವಿದ್ಯಾರ್ಥಿವೇತನವಾಗಿ ವಿತರಿಸಿದೆ. ಇಂದಿನವರೆಗೆ 20,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ.