ಯಾವುದೇ ಸಂಘದ ಸ್ತಂಭಗಳು ಹಾಗೂ ಆ ಸಂಸ್ಥೆಯ ಶಕ್ತಿ ಎಂದರೆ ಅದರ ಸಕ್ರಿಯ ಸದಸ್ಯರು. ಸಂಸ್ಥೆಯಲ್ಲಿ ಹೆಚ್ಚಿನ ಸಂಖ್ಯೆಯ ಸದಸ್ಯರು ಆ ಸಂಸ್ಥೆಯ ಚಟುವಟಿಕೆ ಮತ್ತು ಪ್ರಗತಿಗೆ ಬಲವಾದ ನೆಲೆಯನ್ನು ರೂಪಿಸುತ್ತಾರೆ. ಅಖಿಲ ಹವ್ಯಕ ಮಹಾಸಭಾ 1943 ರಲ್ಲಿ 24 ಸದಸ್ಯರೊಂದಿಗೆ ಪ್ರಾರಂಭವಾಗಿ ಈಗ 29000 ಸದಸ್ಯತ್ವವನ್ನು ಹೊಂದಿದೆ. ಇಂದು ಲಭ್ಯವಿರುವ ಅಂದಾಜಿನ ಪ್ರಕಾರ, ಹವ್ಯಕ ಸಮುದಾಯದ ಒಟ್ಟು ಜನಸಂಖ್ಯೆಯು ಪ್ರಪಂಚದಾದ್ಯಂತ ಸುಮಾರು 10 ಲಕ್ಷ. ಪ್ರಸ್ತುತ ಸದಸ್ಯತ್ವ ತುಂಬ ಉತ್ತೇಜನಕಾರಿಯಾಗಿದ್ದರೂ ಪೂರ್ಣ ತೃಪ್ತಿ ನೀಡುತ್ತಿಲ್ಲ. ಎಲ್ಲಾ ಹವ್ಯಕರು (18 ವರ್ಷ ಮೇಲ್ಪಟ್ಟವರು) ಹವ್ಯಕ ಮಹಾಸಭಾದ ಸದಸ್ಯರಾಗಲು ವಿನಂತಿಸಲಾಗಿದೆ.
ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ.) ಸದಸ್ಯತ್ವ ನೀತಿ - ನಿಯಮಾವಳಿಗಳು
- ಸದಸ್ಯತ್ವ ವರ್ಗಕ್ಕನುಗುಣವಾಗಿ ಸದಸ್ಯತ್ವ ಶುಲ್ಕ ಪಾವತಿಸುವ ಹದಿನೆಂಟು ಮತ್ತು ಮೇಲ್ಪಟ್ಟ ವಯಸ್ಸಿನ ಪ್ರತಿಯೊಬ್ಬ ಹವ್ಯಕ ಪುರುಷ ಯಾ ಮಹಿಳೆಯರು ಈ ಸಂಸ್ಥೆಯ ವೈಯಕ್ತಿಕ ಸದಸ್ಯರಾಗಲು ಅರ್ಹರಾಗಿರುತ್ತಾರೆ.
- ಇದು ಸಮುದಾಯದ ಸಂಸ್ಥೆಯಾಗಿರುವುದರಿಂದ ನಿಯಮಾವಳಿಗಳಂತೆ ಹವ್ಯಕೇತರರನ್ನು ವಿವಾಹವಾದ ಮಹಿಳೆಯರು ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಲಾಗುವದಿಲ್ಲ
- ಎಲ್ಲಾ ವರ್ಗದ ಸದಸ್ಯತ್ವವನ್ನು ಅಂಗೀಕರಿಸುವ ಯಾ ತಿರಸ್ಕರಿಸುವ ಅಧಿಕಾರ ಕಾರ್ಯಕಾರಿ ಸಮಿತಿಗೆ ಇರುವುದು.
- ಕಾರ್ಯಕಾರಿ ಸಮಿತಿಯ ಅಂಗೀಕಾರದ ನಂತರವೇ ಸದಸ್ಯತ್ವ ಜಾರಿಗೆ ಬರುವುದು. ಯಾವುದೇ ಸಂದರ್ಭದಲ್ಲಿ ಈ ಸಂಸ್ಥೆಯ ಸದಸ್ಯರಾಗಲು ಇರುವ ಅರ್ಹತೆಯ ಬಗ್ಗೆ ತಪ್ಪು ಮಾಹಿತಿ ಕೊಟ್ಟಿದ್ದು ತಿಳಿದು ಬಂದಲ್ಲಿ ಅಂತಹ ಸದಸ್ಯರ ಸದಸ್ಯತ್ವವನ್ನು ಅನೂರ್ಜಿತಗೊಳಿಸುವ ಹಕ್ಕು ಆಡಳಿತ ಮಂಡಳಿಗೆ ಇರುವುದು.
- ಸದಸ್ಯತ್ವ ಅಂಗೀಕಾರವಾದ ನಂತರ ಸದಸ್ಯರಿಗೆ ಆಡಳಿತ ಮಂಡಳಿ ಚುನಾವಣೆಯಲ್ಲಿ ಮತದಾನದ ಅಧಿಕಾರ ಇರುತ್ತದೆ.
ಸಂಸ್ಥೆಯ ಸದಸ್ಯತ್ವವು ವೈಯಕ್ತಿಕ ಸದಸ್ಯತ್ವವಾಗಿದ್ದು ಒಬ್ಬರ ಹೆಸರಿನಲ್ಲಿ ಪಡೆದ ಸದಸ್ಯತ್ವವನ್ನು ಇನ್ನೊಬ್ಬರ ಹೆಸರಿಗೆ ವರ್ಗಾಯಿಸಲು ಬರುವುದಿಲ್ಲ. - ಸಂಸ್ಥೆಯ ಸದಸ್ಯತ್ವ ಪಡೆದ ವ್ಯಕ್ತಿಯು ಮೃತನಾದಲ್ಲಿ ಅಂತಹ ಸದಸ್ಯರ ಸದಸ್ಯತ್ವ ರದ್ದಾಗುವದು. ಮೃತರ ಹೆಸರಿನಲ್ಲಿರುವ ಸದಸ್ಯತ್ವವನ್ನು ಕುಟುಂಬದ ಇತರ ವ್ಯಕ್ತಿಗಳ ಹೆಸರಿಗೆ ವರ್ಗಾಯಿಸಲು ಬರುವದಿಲ್ಲ.
ಸಂಸ್ಥೆಯ ಸದಸ್ಯರಿಗೆ ಈ ಸಂಸ್ಥೆಯ ಚಟುವಟಿಕೆಗಳ ಪ್ರಚಾರ, ಧಾರ್ಮಿಕ, ಸಾಂಸ್ಕೃತಿಕ, ವಿಚಾರ ವಿನಿಮಯಗಳ ಸೂಕ್ತ ಲೇಖನಗಳನ್ನೊಳಗೊಂಡ “ಹವ್ಯಕ” ಎಂಬ ನಿಯತ ಕಾಲಿಕ ಪತ್ರಿಕೆಯನ್ನು ಪ್ರತಿ ತಿಂಗಳು ಉಚಿತವಾಗಿ ಭಾರತೀಯ ಅಂಚೆ ಮೂಲಕ ಕಳುಹಿಸಲಾಗುವುದು.
ಸದಸ್ಯತ್ವ ಅರ್ಜಿಯ ಸ್ವರೂಪವನ್ನು ಕೆಳಗೆ ನೀಡಲಾಗಿದೆ. ಸದಸ್ಯತ್ವದ ಶುಲ್ಕವನ್ನು ಕೆಳಗೆ ಪಟ್ಟಿ ಮಾಡಲಾಗಿದೆ.
- ಮಹಾಪಾಲಕ - ರೂ. 10,000.00
- ಮಹಾ ಪೋಷಕ – ರೂ. 2,000.00
- ಪೋಷಕ – ರೂ. 1,000.00
- ಸಹ ಸದಸ್ಯತ್ವ – ರೂ.500.00
ಸದಸ್ಯರಿಗೆ ಸೌಲಭ್ಯಗಳು:
- “ಶ್ರೀ ಅಖಿಲ ಹವ್ಯಕ ಮಹಾಸಭಾ” ಎಂಬ ವಿಶ್ವ ಕುಟುಂಬದ ಹೆಮ್ಮೆಯ ಸದಸ್ಯರು.
- ಮನೆಬಾಗಿಲಿಗೆ ಉಚಿತವಾಗಿ ಹವ್ಯಕ ಮಾಸ ಪತ್ರಿಕೆ
- ಸದಸ್ಯರ ಸ್ವಂತ ಬಳಕೆಗಾಗಿ ಹವ್ಯಕ ಭವನದ ದರದಲ್ಲಿ ರಿಯಾಯಿತಿ
- ಹವ್ಯಕ ಭವನದಲ್ಲಿ ಅತಿಥಿ ಗೃಹದ ಸೌಲಭ್ಯ
- ಓದುತ್ತಿರುವ ನಿಮ್ಮ ಮಕ್ಕಳಿಗೆ ವಸತಿ ಸೌಲಭ್ಯ
- ವಿವಿಧ ಹವ್ಯಕ ಸಂಘಟನೆಯ ಸಂಪರ್ಕ
- ಪ್ರತಿಭಾವಂತ ವ್ಯಕ್ತಿ ಮತ್ತು ಇತರ ಸಂಸ್ಥೆಯ ಮಾಹಿತಿ
- ಹವ್ಯಕ ಮಾಂಗಲ್ಯಕ್ಕೆ ನೋಂದಣಿ
- ಕುಟುಂಬದ ಸದಸ್ಯರಿಗಾಗಿ “ಪ್ರತಿಬಿಂಬ” ದಲ್ಲಿ ಉಚಿತ ಪ್ರವೇಶ.
- ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನದಲ್ಲಿ ಭಾಗವಹಿಸುವ ಅವಕಾಶ.
- ಹವ್ಯಕ ಗ್ರಂಥಾಲಯಕ್ಕೆ ಪ್ರವೇಶ.
- ಹವ್ಯಕ ಅಧ್ಯಯನ ಕೇಂದ್ರದ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ
ನೀವು ಶ್ರೀ ಅಖಿಲ ಹವ್ಯಕ ಮಹಾಸಭಾದ ಹೆಮ್ಮೆಯ ಸದಸ್ಯರಾಗಿದ್ದರೆ – ಪರಿಶೀಲಿಸಿ
ನೀವು ಹವ್ಯಕ ಮಾಸಪತ್ರಿಕೆಯನ್ನು ನಿಯಮಿತವಾಗಿ ಸ್ವೀಕರಿಸುತ್ತಿರುವಿರಿ, ಇಲ್ಲದಿದ್ದರೆ ದಯವಿಟ್ಟು ನಿಮ್ಮ ಅಂಚೆ ಕಛೇರಿಯಲ್ಲಿ ವಿಚಾರಿಸಿ.
ನಿಮ್ಮ ಸದಸ್ಯತ್ವ ಸಂಖ್ಯೆಯನ್ನು ಯಾವಾಗಲೂ ವಿಳಾಸ ಸ್ಲಿಪ್‌ನ ಎಡ ಮೇಲ್ಭಾಗದಲ್ಲಿ ನಮೂದಿಸಲಾಗುತ್ತದೆ.