ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ.)
ಹವ್ಯಕರ ಇತಿಹಾಸ ಪ್ರಾಚೀನವಾದುದು. ಈಗ ದೊರೆತಿರುವ ಆಧಾರಗಳಿಂದ ಕ್ರಿ. ಶ. ಐದನೇ ಶತಮಾನಕ್ಕೂ ಹಿಂದಿನಿಂದಲೇ ಕರ್ನಾಟಕದಲ್ಲಿ ನೆಲೆಯೂರಿದ ಇವರು ಆರ್ಯರೆಂದು ಕರೆಸಿಕೊಳ್ಳುವ ಬ್ರಾಹ್ಮಣ ಪಂಥದವರಾಗಿದ್ದರು. ಉತ್ತರ ಪ್ರದೇಶದ ಅಹಿಚ್ಚತ್ರದಿಂದ ಬಂದವರು ಎನ್ನುವ ಐತಿಹ್ಯವಿದೆ. ಕದಂಬ ರಾಜ್ಯ ಸ್ಥಾಪಕನಾದ ಮಯೂರವರ್ಮನು ಯಜ್ಞ-ಯಾಗಾದಿಗಳನ್ನು ಮಾಡುವದಕ್ಕೋಸ್ಕರ ತನ್ನ ವೈಜಯಂತಿಪುರ (ಬನವಾಸಿ)ಕ್ಕೆ ಕರೆತಂದನೆನ್ನುವ ಉಲ್ಲೇಖಗಳು ದೊರೆಯುತ್ತವೆ. ಹವ್ಯ-ಕವ್ಯಗಳನ್ನು ನಡೆಸುವುದು ಇವರ ಮೂಲ ವೃತ್ತಿಯಾಗಿದ್ದರಿಂದ ಇವರಿಗೆ ಹವ್ಯಕರೆಂದು ಹೆಸರಾಯಿತು.
ದಿವ್ಯ ಭವ್ಯ ಹವ್ಯ ಲೋಕ
ತೃತೀಯ ವಿಶ್ವ ಹವ್ಯಕ ಸಮ್ಮೇಳನ
ಸಾಮಾಜಿಕ ಕಳಕಳಿಯ ಮೂಲಕ ಜನಾನುರಾಗಿಯಾಗಿ ಬೆಳೆಯುತ್ತಿರುವ ಹವ್ಯಕ ಮಹಾಸಭೆ ಡಿಸೆಂಬರ 27, 28, 29 ರಂದು ತೃತೀಯ ವಿಶ್ವ ಹವ್ಯಕ ಸಮ್ಮೇಳನವನ್ನು ಹಮ್ಮಿಕೊಂಡಿದೆ. ವಿಶ್ವ ಮಟ್ಟದ ಈ ಬೃಹತ್ ಉತ್ಸವ ಹವ್ಯಕ ಸಮಾಜದ ಹೆಮ್ಮೆ. ಹಿಂದೆಂದೂ ಕಂಡು ಕೇಳರಿಯದ ವಿಜೃಂಭಣೆ. ಹವ್ಯಕ ಸಮಾಜದ ಶ್ರೇಷ್ಠತೆ, ಸಾಧನೆಗಳನ್ನು ಜಗತ್ತಿಗೆ ಪರಿಚಯಿಸುವ ಸದವಕಾಶ. ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅದರ ಯಶಸ್ಸಿಗೆ ಕಾರಣರಾಗೋಣ. ಶ್ರೀ ಅಖಿಲ ಹವ್ಯಕ ಮಹಾಸಭೆಗೆ ಈಗ 81ರ ಸಂಭ್ರಮ.
ಶುಭ ಕಾರ್ಯ ಹಾಗೂ ಸಭೆ ಸಮಾರಂಭಗಳಿಗೆ ಸುಸಜ್ಜಿತ ಹವಾನಿಯಂತ್ರಿತ ಸಭಾಂಗಣ
ಹವ್ಯಕ ಭವನ
ವಿಶಾಲವಾಗಿ ನಿಂತ ಕಟ್ಟಡದ ನೆಲಮಾಳಿಗೆಯಲ್ಲಿ ಸುವ್ಯವಸ್ಥಿತ ಅಡುಗೆ ಮನೆ, ಸುಮಾರು 200 ಜನರಿಗೆ ಅವಕಾಶವಿರುವ ಊಟದ ಹಾಲ್, ನೆಲಮಹಡಿಯಲ್ಲಿ ಸುಮಾರು 500 ಜನ ಕುಳಿತುಕೊಳ್ಳಬಹುದಾದ ದೊಡ್ಡ ಸಭಾಂಗಣ, ಬಾಲ್ಕನಿ ಮತ್ತು ವಿಶಾಲವಾದ ವೇದಿಕೆ, ಅಕ್ಕಪಕ್ಕದಲ್ಲಿ ವ್ಯವಸ್ಥಿತ ಕೊಠಡಿ ಇರುವ ಇದು ಎಲ್ಲಾ ರೀತಿಯ ಸಮಾರಂಭಗಳಿಗೂ ಅನುಕೂಲಕರವಾಗಿದೆ.
ಹವ್ಯಕ ಸಮುದಾಯಕ್ಕಾಗಿ ವೈವಾಹಿಕ ಸೇವೆಗಳು
ಹವ್ಯಕ - ಮಾಂಗಲ್ಯ
ಸಮಾಜದಲ್ಲಿ ಸಂಘಟನೆಯ ಮಹತ್ವವನ್ನರಿತು ಸ್ವಾತಂತ್ರ ಪೂರ್ವದಲ್ಲೆ ಹವ್ಯಕ ಸಮಾಜದ ಸಂಘಟನೆಗಾಗಿ ಹವ್ಯಕರ ಸಾಮಾಜಿಕ ಸೇವಾ ಸಂಸ್ಥೆಯೊಂದನ್ನು ಸ್ಥಾಪಿಸಿದ ಹಿರಿಯರ ಆಶಯಕ್ಕನುಗುಣವಾಗಿ ಸಮಾಜಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಾಲಕಾಲಕ್ಕೆ ಅನೇಕ ಸೇವಾ ಚಟುವಟಿಕೆಗಳನ್ನು ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ) ಮುಂದುವರಿಸಿಕೊಂಡು ಬಂದಿದೆ.
ಹವ್ಯಕ ಪತ್ರಿಕೆ
ಪತ್ರಿಕೆ
ಹವ್ಯಕ ಸಮಾಜದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಸಮುದಾಯಕ್ಕೆ ಸುದ್ದಿಯನ್ನು ತಲುಪಿಸುವ ಪ್ರಚಾರ ಮಾಧ್ಯಮವಾಗಿ ಉಪಯುಕ್ತವಾದ ಕೆಲಸವನ್ನು ಮಾಡುತ್ತಿದೆ.ಮುಖ್ಯವಾಗಿ ಎರಡು ರೀತಿಯ ಪತ್ರಿಕೆಗಳಿವೆ. ಒಂದು ವ್ಯಾಪಾರ ಪತ್ರಿಕೆ (ವಾಣಿಜ್ಯ) ಮತ್ತೊಂದು ಸಂಘದಿಂದ ಹೊರಡಿಸಿದ ಅದರ ಮುಖವಾಣಿಯಾಗಿದೆ. ಹವ್ಯಕ ಪತ್ರಿಕೆ ಎರಡನೆಯ ವರ್ಗಕ್ಕೆ ಸೇರುತ್ತದೆ. ಇದು ಶ್ರೀ ಅಖಿಲ ಹವ್ಯಕ ಮಹಾಸಭಾದ ಮುಖವಾಣಿ
ಸಮುದಾಯದ ಅವಿಭಾಜ್ಯ ಅಂಗವಾಗಿರಿ
ಸದಸ್ಯರಾಗಿ
ಯಾವುದೇ ಸಂಘದ ಸ್ತಂಭಗಳು ಹಾಗೂ ಆ ಸಂಸ್ಥೆಯ ಶಕ್ತಿ ಎಂದರೆ ಅದರ ಸಕ್ರಿಯ ಸದಸ್ಯರು. ಅಖಿಲ ಹವ್ಯಕ ಮಹಾಸಭಾ 1943 ರಲ್ಲಿ 24 ಸದಸ್ಯರೊಂದಿಗೆ ಪ್ರಾರಂಭವಾಗಿ ಈಗ 29000 ಸದಸ್ಯತ್ವವನ್ನು ಹೊಂದಿದೆ. ಇಂದು ಲಭ್ಯವಿರುವ ಅಂದಾಜಿನ ಪ್ರಕಾರ, ಹವ್ಯಕ ಸಮುದಾಯದ ಒಟ್ಟು ಜನಸಂಖ್ಯೆಯು ಪ್ರಪಂಚದಾದ್ಯಂತ ಸುಮಾರು 10 ಲಕ್ಷ. ಪ್ರಸ್ತುತ ಸದಸ್ಯತ್ವ ತುಂಬ ಉತ್ತೇಜನಕಾರಿಯಾಗಿದ್ದರೂ ಪೂರ್ಣ ತೃಪ್ತಿ ನೀಡುತ್ತಿಲ್ಲ. ಎಲ್ಲಾ ಹವ್ಯಕರು (18 ವರ್ಷ ಮೇಲ್ಪಟ್ಟವರು) ಹವ್ಯಕ ಮಹಾಸಭಾದ ಸದಸ್ಯರಾಗಲು ವಿನಂತಿಸಲಾಗಿದೆ.
SHRI AKHILA HAVYAKA MAHASABHA (R)
#101, 11th Crosss, 8th Main MalleshwaramBengaluru- 560 003. India