ಸಾಮಾಜಿಕ ಕಳಕಳಿಯ ಮೂಲಕ ಜನಾನುರಾಗಿಯಾಗಿ ಬೆಳೆಯುತ್ತಿರುವ ಹವ್ಯಕ ಮಹಾಸಭೆ ಡಿಸೆಂಬರ 27, 28, 29 ರಂದು ತೃತೀಯ ವಿಶ್ವ ಹವ್ಯಕ ಸಮ್ಮೇಳನವನ್ನು ಹಮ್ಮಿಕೊಂಡಿದೆ. ವಿಶ್ವ ಮಟ್ಟದ ಈ ಬೃಹತ್ ಉತ್ಸವ ಹವ್ಯಕ ಸಮಾಜದ ಹೆಮ್ಮೆ. ಹಿಂದೆಂದೂ ಕಂಡು ಕೇಳರಿಯದ ವಿಜೃಂಭಣೆ. ಹವ್ಯಕ ಸಮಾಜದ ಶ್ರೇಷ್ಠತೆ, ಸಾಧನೆಗಳನ್ನು ಜಗತ್ತಿಗೆ ಪರಿಚಯಿಸುವ ಸದವಕಾಶ. ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅದರ ಯಶಸ್ಸಿಗೆ ಕಾರಣರಾಗೋಣ.
ಶ್ರೀ ಅಖಿಲ ಹವ್ಯಕ ಮಹಾಸಭೆಗೆ ಈಗ 81ರ ಸಂಭ್ರಮ. ಬನ್ನಿ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನಿಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಿ. ನಮ್ಮೊಂದಿಗೆ ಹೆಜ್ಜೆ ಹಾಕಿ. ತೃತೀಯ ವಿಶ್ವ ಹವ್ಯಕ ಸಮ್ಮೇಳನದೆಡೆಗೆ ಸಾಗೋಣ, ಹೊಸ ಇತಿಹಾಸ ಬರೆಯೋಣ. ಭವ್ಯ ಪರಂಪರೆಯ ದೃಢ ಹೆಜ್ಜೆಗಳ ಜಗಕೆ ತೋರೋಣ ಬನ್ನಿ, ವಿಶಿಷ್ಟ ಸಂಸ್ಕೃತಿಯ ಅನಾವರಣಕೆ ಸಾಕ್ಷಿಯಾಗೋಣ ಬನ್ನಿ, ಜಗದ ಹವ್ಯಕರೆಲ್ಲ ಬನ್ನಿ . . ಸಮಾಜಕೆ ಹೆಮ್ಮೆಯ ತನ್ನಿ . .