- ಸ್ಮರಣ ಸಂಚಿಕೆ - ಅಮೃತ ವರ್ಷಿಣಿ
- 75 ಕೃತಿಗಳ ಲೋಕಾರ್ಪಣೆ
- 75 ಶ್ರೇಷ್ಠ ಸಾಧಕರಿಗೆ ಸಮ್ಮಾನ
- 75 ಶ್ರೇಷ್ಠ ಕೃಷಿಕರಿಗೆ 'ಹವ್ಯಕ ಕೃಷಿರತ್ನ' ಪ್ರಶಸ್ತಿ
- 75 ಶ್ರೇಷ್ಠ ವೈದಿಕರಿಗೆ 'ಹವ್ಯಕ ವೇದರತ್ನ' ಸಮ್ಮಾನ
- 75 ಯೋಧರಿಗೆ 'ಹವ್ಯಕ ದೇಶರತ್ನ' ಸಮ್ಮಾನ
- 75 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ
- 75 ದೇಶೀ ಗೋದಾನ
- ದೇಶೀ ತಳಿಗಳ ಗೋ ದರ್ಶನ
- 75 ಯಜ್ಞ ಮಂಟಪ ದರ್ಶನ
- 75 ಯಾಗ ಮಂಡಲ ಕಲಾ ಪ್ರದರ್ಶನ ಸ್ಪರ್ಧೆ
- ಅಡಕೆ ಸಂಸ್ಕೃತಿಯ ಸಮಗ್ರ ಪ್ರದರ್ಶನ
- ಅರಮನೆಯಲ್ಲಿ ಆಲೆಮನೆ !
- ಹವ್ಯಕ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಹವ್ಯಕ ಪುಸ್ತಕ ಮೇಳ !
- ಮಕ್ಕಳು-ಮನೋರಂಜನೆ ಅರಮನೆಯ ಮೈದಾನವೇ ಅಜ್ಜನ ಮನೆಯಂಗಳ
- ಮಕ್ಕಳಿಗಾಗಿ ಹವ್ಯಕ ಸಂಸ್ಕೃತಿಯ ಚಿತ್ರ ಸ್ಪರ್ಧೆ (ಸ್ಥಳದಲ್ಲೆ)
- 9 ಗೋಷ್ಠಿ, 24 ವಿಷಯಗಳ ಚಿಂತನ-ಮಂಥನ !
- ಹವ್ಯಕ ಸಂಸ್ಕೃತಿಯ ಛಾಯಾಚಿತ್ರ ಪ್ರದರ್ಶನ ಸ್ಪರ್ಧೆ
- ಕರಕುಶಲ ವಸ್ತು ಪ್ರದರ್ಶನ-ಮಾರಾಟ-ಸ್ಪರ್ಧೆ
- ಹವ್ಯಕ ಸಂಪ್ರದಾಯದ ಚಿತ್ರಕಲಾ ಪ್ರದರ್ಶನ ಮತ್ತು ಸ್ಪರ್ಧೆ
- ವಾಣಿಜ್ಯ ಮಳಿಗೆಗಳು
- ಅಂಗಳದ ಮಂಗಳ ರಂಗೋಲಿ
- ಪಾರಂಪರಿಕ ವಸ್ತುಪ್ರದರ್ಶನ ಮತ್ತು ಸ್ಪರ್ಧೆ
- ಹವ್ಯಕ ಪಾಕೋತ್ಸವ ಆಹಾರ ಮೇಳ
- ಕಲಾವಿದರ ಅಭಿನಯ ರಂಗ
- ಯಜ್ಞಧಾರಿಣಿ ರಾಮಕಥಾ ಪ್ರಸ್ತುತಿ
- ಸಾಮೂಹಿಕ ಭಗವದ್ಗೀತಾ ಪಠಣ
- ಗೀತ ನಾಟ್ಯ ವೈಭವ
- ಯಕ್ಷಗಾನ ನೃತ್ಯೋತ್ಸವ
- ಬೆಂಗಳೂರಿಗೆ ಬಂದಾಗ ಉಳಿದುಕೊಳ್ಳುವುದೆಲ್ಲಿ ಎಂಬ ಚಿಂತೆಯೇ ?
- ಹೂಕುಂಡ (ಇಕಬಾನ) ಕಲಾಸ್ಪರ್ಧೆ
- ನಿರಂತರ ಉಚಿತ ಮಜ್ಜಿಗೆ ನೀರು!
ಸಮಾರಂಭದ ನೆನಪಿನಲ್ಲಿ ಹುಟ್ಟಿಕೊಳ್ಳುವ ಸ್ಮರಣ ಸಂಚಿಕೆಗಳು ಒಂದು ಸಂಪ್ರದಾಯವಲ್ಲದೆ, ಐತಿಹಾಸಿಕ ಮಹತ್ವವನ್ನು ಹೊಂದಿರುತ್ತದೆ. ಮುಂದಿನ ಪೀಳಿಗೆಗೆ ಸಾಕಷ್ಟು ವಿಷಯ ವಿಚಾರಗಳನ್ನು ದಾಖಲಿಸುವ ಒಂದು ಅನುಭವ ಕೋಶವಾಗಿಯೂ ತನ್ನನ್ನು ತಾನು ತೆರೆದುಕೊಳ್ಳುತ್ತದೆ.
* ಶ್ರೀ ಹವ್ಯಕ ಮಹಾಸಭೆಗೆ ಈಗ 75ರ ಅಮೃತ ಮಹೋತ್ಸವ ಸಂಭ್ರಮ. ಅದರ ಸವಿನೆನಪಿಗಾಗಿ ಅಮೃತ ವರ್ಷಿಣಿ ಸುಂದರ ಹೆಸರಿನ ಮೌಲ್ಯಯುತ ಸಂಚಿಕೆ ಲೋಕಾರ್ಪಣೆಯಾಗಲಿದೆ.
* ನಮ್ಮ ಸಂಸ್ಕೃತಿ ಸಂಪ್ರದಾಯವನ್ನು ಬಿಂಬಿಸುವ ಅತ್ಯಂತ ಸುಂದರ ಮುಖಪುಟ.
* ಇದು ಹವ್ಯಕರ ನಡೆ-ನುಡಿ, ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರ, ಕೃಷಿ, ಸಾಹಿತ್ಯ ವಿಜ್ಞಾನ ಕತೆ, ಕವನ ಇತ್ಯಾದಿ ಒಂದು ಮಹತ್ವ ಪೂರ್ಣ ಆಕರ ಸಂಚಿಕೆ.
* ವಿಶ್ವವ್ಯಾಪಿ ಲಕ್ಷಕ್ಕೂ ಹೆಚ್ಚು ಓದುಗರನ್ನು ಆಕರ್ಷಿಸುವ ವೈವಿಧ್ಯಮಯ ಲೇಖನಗಳನ್ನೊಳಗೊಂಡ ಸಂಗ್ರಾಹ್ಯ ಸಂಚಿಕೆ.
* ನಮ್ಮ ಓದುಗ ಬಳಗದ ಅಭಿಮಾನ, ಜಾಹಿರಾತುದಾರರ ಔದಾರ್ಯ ಈ ಸ್ಮರಣ ಸಂಚಿಕೆಯ ಪ್ರಕಟಣೆಯನ್ನು ಸಾಧ್ಯವಾಗಿಸಿದೆ.
* ಇದು ನಿಮ್ಮ ಮಹಾಸಭೆ, ನಿಮ್ಮ ಸಮಾರಂಭ ಎಂಬ ಅಭಿಮಾನವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಜಾಹಿರಾತುಗಳನ್ನು ಹಾಗೂ ಶುಭಾಶಯಗಳನ್ನು ನೀಡಿ ಅದರ ಆರ್ಥಿಕ ಬಲವನ್ನು ಹೆಚ್ಚಿಸಿ.
* ಸಮಾಜಕ್ಕೆ ಶ್ರೇಷ್ಠ ಕೊಡುಗೆಯಾಗಿ ವೈವಿಧ್ಯಮಯ ಮಾಹಿತಿಯನ್ನು ಒದಗಿಸುವ ಉತ್ತಮ ಸಂಚಿಕೆಯಾಗಿ ಲೋಕಾರ್ಪಣೆಗೊಳ್ಳಲಿದೆ.
* ಅಮೃತ ಮಹೋತ್ಸವ ಮತ್ತು ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಸಮಾರಂಭದ ಮೂರೂ ದಿವಸಗಳ ವರದಿ ಹಾಗೂ ಸಂಬಂಧಪಟ್ಟ ಚಿತ್ರಗಳು ಸಂಚಿಕೆಗೊಂದು ವಿಶೇಷವಾದ ಅಲಂಕಾರವನ್ನು ನೀಡಲಿದೆ.
* ಸಂಚಿಕೆಯ ಜೀವಾಳ ಜಾಹಿರಾತುಗಳು. ಹೆಚ್ಚಿನ ಸಂಖ್ಯೆಯಲ್ಲಿ ಜಾಹಿರಾತುಗಳನ್ನು ನೀಡಿ ಆರ್ಥಿಕ ಬಲವನ್ನು ಹೆಚ್ಚಿಸಿ.
ಪ್ರಧಾನ ಸಂಪಾದಕ : ನಾರಾಯಣ ಭಟ್, ಹುಳೇಗಾರು
ಮೊಬೈಲ್ : 98800 49070
ಅಮೃತ ಮಹೋತ್ಸವ ಗ್ರಂಥ ಮಾಲಿಕೆ
ಪುಸ್ತಕಗಳು ನಮ್ಮ ಆತ್ಮೀಯ ಸಂಗಾತಿಗಳು. ಜೀವನಾನುಭವ ನೀಡುವ ಅನುಭವಿಗಳು. ಇತ್ತೀಚಿನ ದಿನಗಳಲ್ಲಿ ಓದುವ ಸಂಸ್ಕೃತಿ ಕಡಿಮೆಯಾಗುತ್ತಿರುವುದು ನಿಜವಾಗಲೂ ವಿಷಾದನೀಯ. ಇಂದಿನ ಯುವ ಪೀಳಿಗೆಗೆ ಇದರ ಮಹತ್ವವನ್ನು ತಿಳಿಸುವ ದೃಷ್ಟಿಯಿಂದ ಅಖಿಲ ಹವ್ಯಕ ಮಹಾಸಭೆ ಈ ಪುಸ್ತಕ ಸಂಸ್ಕೃತಿಯನ್ನು ವಿಶೇಷವಾಗಿ ಹುಟ್ಟುಹಾಕಿ ಬೆಳೆಸುವ ಅಭಿಲಾಷೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವದ ಸವಿನೆನಪಿಗಾಗಿ ಹೆಸರಾಂತ ಹಾಗೂ ಯುವ ಲೇಖಕರ 75 ಕೃತಿಗಳನ್ನು ಲೋಕಾರ್ಪಣೆ ಗೊಳ್ಳಲಿದೆ.
* ಹವ್ಯಕ ಮಹಾಸಭೆಯ ಇತಿಹಾಸದಲ್ಲಿ ಮಾತ್ರವಲ್ಲದೆ ಇಡೀ ಕನ್ನಡ ಸಾಹಿತ್ಯ ಲೋಕದಲ್ಲಿಯೇ ಈ 75 ಪುಸ್ತಕಗಳ ಬಿಡುಗಡೆಯು ಒಂದು ಅತ್ಯದ್ಭುತ ಯೋಜನೆಯಾಗಿ ಅಭೂತಪೂರ್ವ ದಾಖಲೆಯೆನಿಸಲಿದೆ.
* 18ನೆಯ ಶತಮಾನದ ಸುಬ್ರಹ್ಮಣ್ಯ ಕವಿಯಿಂದ ಆರಂಭಿಸಿ 21ನೆಯ ಶತಮಾನದ ಲೇಖಕರ ವರೆಗಿನ ಉತ್ತಮ ಕೃತಿಗಳು ಬಿಡುಗಡೆಯಾಗಲಿದೆ.
* ಪ್ರಾಚೀನ ಕಾವ್ಯ, ಹವ್ಯಕ ಸಂಸ್ಕೃತಿ, ಕೃಷಿ, ಆರೋಗ್ಯ, ವೈದ್ಯಕೀಯ, ಶೈಕ್ಷಣಿಕ, ಯೋಗ, ಯಕ್ಷಗಾನ, ಪೌರಾಣಿಕ ಕಾದಂಬರಿ, ಸಾಧಕರು, ಕಲಾವಿದರು, ಕತೆ, ಕವನ, ವೇದ ವಿಜ್ಞಾನ ಹೀಗೆ ಹತ್ತು ಹಲವು ವಿಷಯಗಳನ್ನೊಳಗೊಂಡ ಅರ್ಥಪೂರ್ಣ ಗ್ರಂಥಗಳಾಗಲಿದೆ.
* ಸುಂದರವಾದ ಅರ್ಥಪೂರ್ಣ ಮುಖಪುಟ ಮತ್ತು ಉತ್ತಮ ಮುದ್ರಣದ ಆಕರ್ಷಣೀಯ ಗ್ರಂಥಗಳು ಸುಲಭ ದರದಲ್ಲಿ ಸಿಗುವಂತೆ ಮುದ್ರಿಸಲಾಗಿದೆ.
* ಸಮ್ಮೇಳನದ ಈ ಮೂರು ದಿನಗಳಲ್ಲಿ ಸುಮಾರು ಐದು ಸಾವಿರ ಪುಸ್ತಕ ಪ್ರದರ್ಶನ ಹಾಗೂ ಪ್ರಕಟಗೊಳ್ಳುತ್ತಿರುವ 75 ಪುಸ್ತಕಗಳ ರಿಯಾಯತಿ ದರದ ಮಾರಾಟ.
* ಪುಸ್ತಕವನ್ನು ಸಂಗ್ರಹಿಸಿ ಇಡುವ ಈ ಪರಂಪರೆ ಮುಂದಿನ ಪೀಳಿಗೆಗೆ ಅಂದಿನ ಜೀವನ ಕ್ರಮದ ಮಹತ್ವವನ್ನು ತಿಳಿಸುವುದೇ ಮುಖ್ಯ ಉದ್ದೇಶ.
* ಪುಸ್ತಕಗಳನ್ನು ಕೊಂಡು ಓದಿ. ಪುಸ್ತಕ ಸಂಸ್ಕೃತಿಯನ್ನು ಬೆಳಸಿ. ಮಹಾಸಭೆಯ ಈ ಅಭೂತಪೂರ್ವ ಯೋಜನೆಗೆ ಸಕಾರಾತ್ಮಕವಾಗಿ ಸ್ಪಂದಿಸಿ.
* ಸಮಾಜದ ಇಂತಹ ಹೆಮ್ಮೆಯ ವಿರಳಾತಿವಿರಳ ಕಾರ್ಯಕ್ರಮಕ್ಕೆ ಸಾಕ್ಷೀಭೂತರಾಗಿ, ಆ ಕ್ಷಣವನ್ನು ಮನದುಂಬಿಸಿಕೊಳ್ಳಿ.
ಸಂಚಾಲಕ : ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ಟ
ಮೊಬೈಲ್ : 94488 15105
‘ಹವ್ಯಕ ಸಾಧಕರತ್ನ’ ಪ್ರಶಸ್ತಿ
ನಮ್ಮ ಸಮಾಜ ಎಂದೂ ನಿಂತನೀರಾಗಿಲ್ಲ. ನಿರಂತರವಾಗಿ ಪ್ರತಿಭೆಗಳು ಉದಯಿಸಿ, ಕುಟುಂಬದ ಸಮಾಜದ ಸಾಕಾರವನ್ನು ಪಡೆದು ಅದು ವಿದ್ವತ್ತಾಗಿ ಪರಿಣಮಿಸಿದೆ. ಕುಲಗುರುಪೀಠಗಳು ಹೇಳುವಂತೆ ಹವ್ಯಕರೆಂಬುದು ಒಂದು ವಿಶೇಷ ತಳಿ. ಈ ಪ್ರತಿಭಾಸಂಪನ್ನ ವಂಶಗಳಲ್ಲಿ ಅಗಣಿತವಾಗಿ ಸಾಧಕರು ಇದ್ದಾರೆ. ಅವರಲ್ಲಿ ಮೂರ್ಧನ್ಯಪ್ರಾಯರಾದ ವಿವಿಧಕ್ಷೇತ್ರದ ಸಾಧಕರಿಗೆ ಸಮ್ಮಾನವನ್ನು ಮಾಡಲಾಗುವುದು.
* ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾರ್ವಕಾಲಿಕ ಸಾಧನೆಗೈದ 75 ಸಾಧಕರಿಗೆ ಗೌರವ ಸನ್ಮಾನ
* ಶೈಕ್ಷಣಿಕ, ಸಾಂಸ್ಕೃತಿಕ, ವೈದ್ಯಕೀಯ, ಸಾಮಾಜಿಕ, ಸಾಹಿತ್ತಿಕ, ಜಾನಪದ, ಕಲೆ, ರಂಗಭೂಮಿ, ವೈಜ್ಞಾನಿಕ, ಔದ್ಯೋಗಿಕ, ವಿದ್ಯುಚ್ಛಕ್ತಿ, ವ್ಯಾಪಾರ, ಸಿನಿಮಾ, ಕ್ರೀಡೆ, ಬ್ಯಾಂಕಿಂಗ್, ಸಹಕಾರ, ನ್ಯಾಯಾಂಗ,ಸರ್ಕಾರಿ ಸೇವೆ ಮುಂತಾದ ಯಾವುದೇ ಕ್ಷೇತ್ರಗಳಲ್ಲಿ ಸಾಧನೆಗೈದ ಹವ್ಯಕರು ಈ ಪ್ರಶಸ್ತಿಗೆ ಅರ್ಹರಾಗುತ್ತಾರೆ.
* ರಾಜ್ಯ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದ, ಸರಕಾರದ ವಿವಿಧ ಇಲಾಖೆಗಳಲ್ಲಿ ಅತ್ಯುನ್ನತ ಸ್ಥಾನ ಪಡೆದು ಸಮಾಜ ಸೇವೆಗೈದ, ಸಮಾಜದ ಹಿರಿಯರಾಗಿ ಯುವ ಪೀಳಿಗೆಗೆ ಮಾರ್ಗದರ್ಶನ ನೀಡಿದ ಹವ್ಯಕರು ಈ ಸನ್ಮಾನಕ್ಕೆ ಭಾಜನರಾಗಲಿದ್ದಾರೆ.
ಸಂಚಾಲಕ : ಜಿ. ಜಿ. ಹೆಗಡೆ, ತಲೆಕೇರಿ
ಮೊಬೈಲ್ : 99007 95574
ಕೃಷಿತೋ ನಾಸ್ತಿ ಧುರ್ಭಿಕ್ಷಮ್ | ಭೂ ಸೇವೆ ಮಾಡುವವನಿಗೆ ಅನ್ನಭಯವಿಲ್ಲ. ಇದನ್ನು ಅರಿತ ನಮ್ಮ ಪೂರ್ವಿಕರು ಆ ಕಾಲದಿಂದಲೂ ಬೇಸಾಯವೇ ಪ್ರಧಾನ ಜೀವಿಕೆಯಾಗಿ ಕಂಡುಕೊಂಡಿದ್ದಾರೆ. ಲೋಕದಲ್ಲಿ ಕೃಷಿಕ ಬ್ರಾಹ್ಮಣರಿದ್ದರೆ, ಅದು ನಾವು ಮಾತ್ರ. ಅಂಥ ಅನ್ನದಾತನಾಗಿ ಜೀವನವನ್ನು ಸಾಗಿಸುತ್ತಿರುವ ಕೃಷಿಕರು ದೇಶದ ಬೆನ್ನೆಲುಬು. ಅವರನ್ನು ಸಕಾಲಿಕವಾಗಿ ಸಮ್ಮಾನಿಸುವುದು ಸಂಘಟನೆಯ ಕರ್ತವ್ಯ.
* ಶ್ರೀ ಅಖಿಲ ಹವ್ಯಕ ಮಹಾಸಭೆಗೆ 75 ವರ್ಷ ತುಂಬಿದ ಸುಸಂದರ್ಭದಲ್ಲಿ 75 ಶ್ರೇಷ್ಠ ಕೃಷಿ ಸಾಧಕರಿಗೆ ಗೌರವ ಸನ್ಮಾನ.
* ಬ್ರಾಹ್ಮಣ ಜನಾಂಗಗಳಲ್ಲಿ ಹವ್ಯಕ ಬ್ರಾಹ್ಮಣರು ಕೃಷಿ ಮತ್ತು ಋಷಿ ಪರಂಪರೆಯನ್ನು ಸಂಪ್ರದಾಯವನ್ನು ಬೆಳಸಿ ಉಳಿಸಿದ ಹೆಗ್ಗಳಿಕೆ ಹೊಂದಿದವರು.
* ಅಡಕೆ, ಬಾಳೆ, ತೆಂಗು, ಕಾಳು ಮೆಣಸು, ಯಾಲಕ್ಕಿ, ರಬ್ಬರ್, ಕಾಫಿ, ಟೀ, ರೇಷ್ಮೆ, ಭತ್ತ, ರಾಗಿ, ಗೋಧಿ, ಶುಂಠಿ, ಅರಿಸಿನ, ಬೇಳೆಕಾಳುಗಳು, ಹಣ್ಣು, ಪುಷ್ಪ, ಮುಂತಾದ ಬೆಳೆಗಳನ್ನು ವೈಜ್ಞಾನಿಕವಾಗಿ ಬೆಳೆದು ಉತ್ತಮ ಕೃಷಿ ಮಾಡಿ, ಅತ್ಯುತ್ತಮ ಇಳುವರಿಯನ್ನು ಪಡೆದ ಕೃಷಿಕರು.
* ಕೃಷಿ ಕ್ಷೇತ್ರಗಳಲ್ಲಿ ಸಂಶೋಧಕರಾಗಿ, ಕೃಷಿ ತಜ್ಞರಾಗಿ ವಿವಿಧ ಸಂಶೋಧನಾಲಯಗಳಲ್ಲಿ ಸೇವೆ ಸಲ್ಲಿಸಿರುವ ವಿಜ್ಞಾನಿಗಳು.
* ಕೃಷಿ ಬೆಳೆಗಳಿಗೆ ಅತ್ಯುತ್ತಮ ಕೀಟನಾಶಕ/ ಶಿಲೀಂದ್ರ ನಾಶಕಗಳನ್ನು ಸಂಶೋಧಿಸಿದವರು.
* ಬೆಳೆಗಳಿಗೆ ಉತ್ತಮ ಮಾದರಿಯ ಮಣ್ಣು, ಮಣ್ಣಿನ ಫಲವತ್ತತೆ, ಮಣ್ಣಿನಲ್ಲಿರುವ ಕೊರತೆ ಮತ್ತು ಪೌಷ್ಠಿಕಾಂಶಗಳಿಂದ ಕೂಡಿದ ಗೊಬ್ಬರಗಳನ್ನು ಅನ್ವೇಷಿಸಿದವರು.
* ಕೃಷಿ ಉಪಕರಣವನ್ನು ಸಂಶೋಧಿಸಿದವರು, ಪರಿಚಯಿಸಿದವರು.
ಸಂಚಾಲಕ : ಡಾ| ಬಿ.ವಿ. ನರಹರಿ ರಾವ್
ಮೊಬೈಲ್ : 98861 83092
ವೇದಶ್ಶಿವಃ ಶಿವೋ ವೇದಃ ವೇದಾಧ್ಯಾಯೀ ಸದಾಶಿವಃ || ನಮ್ಮ ಸಮಾಜದಲ್ಲಿ ಕೃಷಿಯನ್ನು ನಂಬಿ ಬದುಕುಸಾಗಿಸುವಷ್ಟೇ ಪ್ರಮಾಣದಲ್ಲಿ ವೈದಿಕವೃತ್ತಿಯನ್ನಾಶ್ರಯಿಸಿ ಬಾಳುತ್ತಿರುವವರೂ ಇದ್ದಾರೆ. ಈ ಋತ್ವಿಜ ಕಾಯಕವನ್ನು ನಮ್ಮವರು ಬಹಳ ಸೂಕ್ತವಾಗಿ ಶಾಸ್ತ್ರಸಮ್ಮತವಾಗಿ ನಡೆಸುತ್ತಿದ್ದಾರೆ. ಈ ಆದರಣೀಯ ಆಚಾರ್ಯತ್ವದಲ್ಲಿ ಇರುವ ಸಮಾಜಬಂಧುಗಳನ್ನು ಸಮ್ಮಾನಿಸುವುದು ಮಹಾಸಭೆಯ ಆದ್ಯ ಕರ್ತವ್ಯ.
* ಸಮಾಜದಲ್ಲಿರುವ ಅಂಕು ಡೊಂಕುಗಳನ್ನು ತಿದ್ದಿ ವೈದಿಕ ಪರಂಪರೆಯನ್ನು ಚೆನ್ನಾಗಿ ತಿಳಿದು, ಉಳಿಸಿ, ಬೆಳೆಸಿದ 75 ಶ್ರೇಷ್ಠ ವೈದಿಕರಿಗೆ ಗೌರವ ಸನ್ಮಾನ.
* ಉತ್ತಮ ಸಂಸ್ಕಾರ, ಶ್ರೇಷ್ಠ ಚಿಂತನೆ, ಅತ್ಯುತ್ತಮ ನಡವಳಿಕೆ, ಉತ್ತಮ ಸಹಕಾರ, ಸಮಾಜವನ್ನು ವೈದಿಕ / ಧಾರ್ಮಿಕ ನೆಲೆಗಟ್ಟಿನಲ್ಲಿ ಕೊಂಡೊಯ್ಯುವುದು ಹವ್ಯಕ ಸಮಾಜದ ಶ್ರೇಷ್ಠ ಪರಂಪರೆಯನ್ನು ಯುವ ಜನರಿಗೆ ತಿಳಿಸುವುದು ಮುಂತಾದ ವಿಷಯಗಳಲ್ಲಿ ಪಾಲ್ಗೊಳ್ಳುವಿಕೆ.
* ಧಾರ್ಮಿಕ ನೆಲೆಯಾದ ಋಷಿ ಪರಂಪರೆಯನ್ನು ಉಳಿಸಿ ಬೆಳೆಸುವುದು.
* ಮದುವೆ, ಉಪನಯನ, ಚೌಲ, ದೇವತಾರ್ಚನೆ, ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದವರು.
* ಅಸನ ಕರ್ಮ-ಪಿತೃ ಪ್ರಧಾನ ಕಾರ್ಯಗಳು ಮುಂತಾದವುಗಳಲ್ಲಿ ಶ್ರೇಷ್ಠ ಪರಂಪರೆಯನ್ನು ಉಳಿಸಿದವರು.
* ಶ್ರೇಷ್ಠವಾದ ಹವ್ಯಕ ಸಂಸ್ಕೃತಿಯನ್ನು ಉಳಿಸಿ ಬೆಳಸಿದವರು
* ಮೇಲೆ ತಿಳಿಸಿದ ಕ್ಷೇತ್ರವಲ್ಲದೆ, ಹೋಮ, ಹವನ ಮುಂತಾದ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು.
ಸಂಚಾಲಕ : ಶ್ರೀ ರಾಘವೇಂದ್ರ ಭಟ್ಟ, ಕ್ಯಾದಗಿ
ಮೊಬೈಲ್ : 90668 82272
ಕಾಯುವ ಕಾಯಕದವರಿಗೆ ಸಮಾಜದ ಸೆಲ್ಯೂಟ್
ಹವ್ಯಕವ್ಯಗಳಲ್ಲಿ ಪ್ರವೀಣರಾದ ಹವ್ಯಕರು ತಮ್ಮನ್ನು ಅಷ್ಟಕ್ಕೇ ಸೀಮಿತಗೊಳಿಸಿಕೊಳ್ಳದೇ, ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು ಹವ್ಯಕರು. ಧರ್ಮ ರಕ್ಷಣೆ – ಭಾರತೀಯ ಸಂಸ್ಕೃತಿಯ ಸಂರಕ್ಷಣೆಯಲ್ಲಿ ಮುಂಚೂಣಿ ಪಾತ್ರವಹಿಸಿದ ಹವ್ಯಕರು, ದೇಶ ರಕ್ಷಣೆಯ ವಿಚಾರದಲ್ಲೂ ಹಿಂದೆಬಿದ್ದವರಲ್ಲ!
‘ಶಾಪಾದಪಿ ಶರಾದಪಿ’ ಎಂಬಂತೆ ಬೌದ್ಧಿಕವಾಗಿ ನಾಡನ್ನು ಸಂಪದ್ಭರಿತಗೊಳಿಸಿದಂತೆ, ಪರಾಕ್ರಮದ ಮೂಲಕ ನಾಡನ್ನು ಸಂರಕ್ಷಿಸುವ ಕಾಯಕದಲ್ಲಿಯೂ ಹವ್ಯಕರ ಕೊಡುಗೆ ಅನುಪಮವಾದದ್ದು. ರಾಷ್ಟ್ರ ರಕ್ಷಣೆಯ ಯಜ್ಞದಲ್ಲಿ ಭಾಗವಹಿಸಿದ ಸಮಾಜದ ಬಂಧುಗಳನ್ನು ಗೌರವಿಸುವ, ಆದರಿಸುವ ಸದವಕಾಶವೇ ‘ಯೋಧ ಸಮ್ಮಾನ’
* ರಾಷ್ಟ್ರ ರಕ್ಷಣೆಯ ಕಾಯಕದಲ್ಲಿ ಭಾಗಿಗಳಾಗಿ ; ಸಮಾಜಕ್ಕೆ ಹೆಮ್ಮೆ ತಂದವರಿಗೆ, ಸಮಾಜದ ಸಮ್ಮುಖದಲ್ಲಿ ಮಹಾಸಭೆಯಿಂದ ಸಮ್ಮಾನ.
* ಮಹಾಸಭೆಯ ಅಮೃತಮಹೋತ್ಸವದ ನಿಮಿತ್ತ, 75 ಅಪ್ರತಿಮ ಧೀರ ಯೋಧರಿಗೆ ಸಮಾಜದ ಗೌರವಾರ್ಪಣೆ.
* ಕುಟುಂಬವನ್ನು ತೊರೆದು, ದೇಶದ ಗಡಿಭಾಗಗಳಲ್ಲಿ ಸೇವೆಸಲ್ಲಿಸಿದ ಯೋಧರಿಗೆ, ಹವ್ಯಕ ಸಮಾಜವೆಂಬ ವಿಶ್ವಕುಟುಂಬದ ಸಮ್ಮುಖದಲ್ಲಿ ಸಮ್ಮಾನ.
* ಧೀರ ಯೋಧರನ್ನು ಸಮ್ಮಾನಿಸುವ ಯೋಗ ಮಹಾಸಭೆಯದ್ದಾದರೆ, ಅಷ್ಟಾದರೂ ಧೀರ ಯೋಧರನ್ನು ಒಂದೆಡೆ ನೋಡುವ, ಅಭಿನಂದಿಸುವ ಸುಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಮಾಜದ ಬಂಧುಗಳದ್ದು!
ಮಾನದಂಡ :
* ಭಾರತೀಯ ಸೇನೆಯಲ್ಲಿ ಸೇವೆಗೈದು ನಿವೃತ್ತರಾದವರು ಅಥವಾ ಈಗ ಸೇವೆ ಸಲ್ಲಿಸುತ್ತಿರುವವರು.
* ವಾಯು, ಜಲ, ಭೂಸೇನೆಯ ಯಾವುದೇ ವಿಭಾಗದಲ್ಲಿ ಯಾವುದೇ ಹುದ್ದೆಯಲ್ಲಿ ಇರಬಹುದು.
ಸಂಚಾಲಕ : ರವಿನಾರಾಯಣ ಪಟ್ಟಾಜೆ
ಮೊಬೈಲ್ : 98809 93399
‘ಹವ್ಯಕ ವಿದ್ಯಾರತ್ನ’ ಪುರಸ್ಕಾರ
ಬೆಳೆಯ ಸಿರಿಯನ್ನು ಮೊಳಕೆಯಲ್ಲಿ ನೋಡು ಎಂಬ ಮಾತಿನಂತೆ ನಾಳಿನ ಸಾಧನೆಯನ್ನು ವಿದ್ಯಾಭ್ಯಾಸ ಕಾಲದ ಪ್ರತಿಭೆಯಿಂದಲೇ ಗುರುತಿಸಬಹುದು. ನಮ್ಮ ಸಮಾಜದ ಸಂತಾನಗಳು ವಿದ್ಯಾಚತುರರು ಎಂಬುದು ಸಾರ್ವತ್ರಿಕ ಮತ್ತು ಸಾರ್ವಕಾಲಿಕ ಸತ್ಯ. ಇಂಥ ಪ್ರತಿಭೆಗಳನ್ನು ವಿದ್ಯಾಭ್ಯಾಸದ ಕಾಲದಲ್ಲಿ ಪುರಸ್ಕರಿಸಿದರೆ ಅವರ ಮುಂದಿನ ಸಾಧನೆಗೆ ಬೆಂಬಲವಾಗುತ್ತದೆ. ಈ ನಿಟ್ಟಿನಲ್ಲಿ ಉನ್ನತ ಮಟ್ಟದಲ್ಲಿ ವಿದ್ಯಾಸಾಧನೆಯನ್ನು ಮಾಡಿದವರನ್ನು ಪುರಸ್ಕರಿಸುವುದು ಮಹಾಸಭೆಗೆ ಹೆಮ್ಮಯ ವಿಷಯ.
ಹಿಂದಿನ ದಶಕದ ರ‍್ಯಾಂಕ್ ವಿಜೇತರಿಗೆ ವಿದ್ಯಾರ್ಥಿ ಪುರಸ್ಕಾರ (2009 ರಿಂದ 2018 ರ ತನಕ)
ಎಸ್. ಎಸ್. ಎಲ್.ಸಿ. – ರಾಜ್ಯ ಮಟ್ಟದ ರ‍್ಯಾಂಕ್
ಪಿ.ಯು.ಸಿ – ರಾಜ್ಯ ಮಟ್ಟದ ರ‍್ಯಾಂಕ್
ಪದವಿ – ವಿಶ್ವವಿದ್ಯಾನಿಲಯದ ರ‍್ಯಾಂಕ್
ಡಿಪ್ಲೋಮೋ – ವಿಶ್ವವಿದ್ಯಾನಿಲಯದ ರ‍್ಯಾಂಕ್
ಸ್ನಾತಕೋತ್ತರ – ವಿಶ್ವವಿದ್ಯಾನಿಲಯದ ರ‍್ಯಾಂಕ್
ಇದಲ್ಲದೆ ರಾಜ್ಯ, ರಾಷ್ಟ್ರ, ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಸಾಧನೆ ಗೈದವರು.
ಸಂಚಾಲಕ : ಪ್ರಮೋದ ಪಂಡಿತ್
ಮೊಬೈಲ್ : 94483 09873
ಗೋದಾನ, ಗೋಪೂಜೆ ನಿನ್ನೆ ಮೊನ್ನೆಯದಲ್ಲ. ಸಾವಿರಾರು ವರ್ಷಗಳಿಂದ ನಡೆದು ಬಂದ ಒಂದು ಶ್ರೇಷ್ಠ ಸಂಪ್ರದಾಯ. ಒಂದು ಕಾಲದಲ್ಲಿ ಹಣದ ಬದಲು ಗೋವನ್ನೇ ಕೊಡುವ ಪದ್ಧತಿ ಇತ್ತು. ಗೋವು ಮಾನವ ಜನಾಂಗದ ಪೂಜನೀಯ ವಸ್ತು ಮಾತ್ರವಲ್ಲದೇ ಅದರಲ್ಲಿಯೇ ಭಗವಂತನನ್ನು ಕಾಣುವ ಪವಿತ್ರ ಭಾವನೆ ಬೆಳೆದು ಬಂದಿತ್ತು. ಇತ್ತೀಚಿನ ದಿನಗಳಲ್ಲಿ ಬಂಗಾರದ ಅಥವಾ ಬೆಳ್ಳಿಯ ಪ್ರತಿಮೆಯನ್ನು ನೀಡಿ ಗೋದಾನ ನೀಡುವ ಪದ್ಧತಿ ಬೆಳದು ಬಂದಿರುವುದನ್ನು ಕಾಣುತ್ತಿದ್ದೇವೆ.
ಅಮೃತ ಮಹೋತ್ಸವದ ಈ ಶುಭ ಸಂದರ್ಭದಲ್ಲಿ 75 ನಿಜವಾದ ಗೋವುಗಳನ್ನು ದಾನಮಾಡುತ್ತಿರುವ ಹಾಗೂ ಪೂಜಿಸುವ ಶ್ರೇಷ್ಠ ಕಾರ್ಯ ನಡೆಯುತ್ತದೆ.
ದೇಶೀ ತಳಿಯ ಉಳಿವಿಗಾಗಿ ಹಾಗೂ ಮನುಕುಲದ ಒಳಿತಿಗಾಗಿ ದೇಶೀ ತಳಿಯ ಗೋದಾನ.
ಇಂತಹ ಅಪೂರ್ವ ಸಂದರ್ಭವನ್ನು ನೋಡುವ ಭಾಗ್ಯ ನಮ್ಮದು. ಗೋವನ್ನು ಆರಾಧಿಸಿ ಪುಣ್ಯ ಕಟ್ಟಿಕೊಳ್ಳೋಣ.
ಅರ್ಹತೆ ಮತ್ತು ಸಾಕಲು ಆಸಕ್ತಿ ಇರುವ 75 ಅರ್ಹ ಕುಟುಂಬಗಳಿಗೆ ದೇಶೀ ತಳಿಯ ಗೋದಾನ ಮಾಡಲಾಗುವುದು.
ಅಂಥ ಸತ್ಪಾತ್ರರನ್ನು ಗುರುತಿಸಿ ಮಹಾಸಭೆಗೆ ತಿಳಿಸಬಹುದು.
ಸಂಚಾಲಕ : ಡಾ. ವೈ. ವಿ. ಕೃಷ್ಣಮೂರ್ತಿ
ಮೊಬೈಲ್ : 94495 95206
ಗಾವೋ ಮೇ ಮಾತರಸ್ಸಂತು ಎಂದು ಪೂಜಿಸಿ ಗೋಗ್ರಾಸವನ್ನು ನೀಡಿಯೇ ಭೋಜನ ಮಾಡುವ ಬ್ರಾಹ್ಮಣ ಸಂಪ್ರದಾಯ ನಮ್ಮದು. ಭಾರತೀಯ ಗೋವಂಶವೇ ನಿಜವಾದ ಗೋ ಮಾತೆ ಎಂಬುದು ಲೋಕಕ್ಕೆ ಅರಿವಾಗತೊಡಗಿದೆ. ನೂರಾರು ಸಂಖ್ಯೆಯಲ್ಲಿದ್ದ ಭಾರತೀಯ ಗೋತಳಿಗಳು ಅಳಿವಿನಂಚಿನಲ್ಲಿವೆ. ಅವುಗಳಲ್ಲಿ ಲಭ್ಯವಿರುವ 35 ತಳಿಗಳಲ್ಲಿ ಹಲವನ್ನು ನೋಡುವ ಭಾಗ್ಯವನ್ನು ಅಮೃತಮಹೋತ್ಸವದಲ್ಲಿ ಒದಗಿಸಲಾಗಿದೆ.
* ಹಳ್ಳಿಕಾರ್, ಗಿರ್, ಕಾಂಕ್ರೀಜ್, ಮಲೆನಾಡುಗಿಡ್ಡ, ಪುಂಗನೂರು ತಳಿಗಳ ಗೋ, ನಂದಿ, ಕರುಗಳು.
* ಆಕಳಿಗೆ ಸ್ವಯಂ ಹುಲ್ಲು ತಿನಿಸುವ ಮತ್ತು selfie with Desi Cow ಒಂದು ವಿರಳ ಅವಕಾಶ
* ಮಕ್ಕಳಿಗೆ ಪುಟ್ಟಂಬೆ (ಕರು/ಕಂಜಿ)ಗಳೊಂದಿಗೆ ಬಾಲಲೀಲೆಗಳಿಗೆ ಸುಯೋಗ
* ದೇಶೀಯ ನಂದಿಗಳ ಚಕ್ಕಡಿಬಂಡಿ ಸುತ್ತಾಟ
* ಪುರೋಹಿತರಿಂದ ಸಂಕಲ್ಪ ಸಹಿತ ಗೋಪೂಜೆಯ ಪುಣ್ಯಾವಸರ
* ಸಾರ್ವಜನಿಕರಿಗೆ ಗೋಪೂಜೆಗೆ ಮತ್ತು ಸೇವೆಗೆ ಅವಕಾಶ ಇದೆ.
ಸಂಚಾಲಕ : ಅರವಿಂದ ಶರ್ಮಾ ಮೊಬೈಲ್ : 99011 33548
ಯಜ್ಞ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ. ದೇವರು ಕೊಟ್ಟ ದ್ರವ್ಯಗಳನ್ನು ಅಗ್ನಿಕುಂಡದ ಮೂಲಕ ದೇವರಿಗೆ ಸಮರ್ಪಿಸುವ ಕರ್ಮವನ್ನು ಯಾಗವೆಂದು ಕರೆದರು. ಇಹದ ಇಷ್ಟಾರ್ಥಸಿದ್ಧಿಗಳಿಂದ ಹಿಡಿದು ಪರಮಾರ್ಥದ ಪ್ರಾಪ್ತಿಯವರೆಗೆ ಯಜ್ಞದ ಪರಿಣಾಮದ ವ್ಯಾಪ್ತಿ ಇದೆ. ನಮ್ಮ ಸಂಸ್ಕೃತಿಯ ಜೊತೆ ಹಾಸುಹೊಕ್ಕಾಗಿರುವ ಯಜ್ಞ, ಯಜ್ಞದ ನಿಯಮಗಳು, ಅದರ ವಿವಿಧತೆಗಳು, ಆಚರಣೆಯ ಬಗೆಗಳು, ಉದ್ದೇಶಗಳು, ಇವೆಲ್ಲದರ ಜ್ಞಾನ ನಮ್ಮ ದೃಷ್ಟಿಪಥದಿಂದ ದೂರವಾಗುತ್ತಿದೆ. ಯಜನ ಮತ್ತು ಯಾಜನಗಳ ಅಧಿಕಾರವಿರುವ, ತಿಳಿ ಹೇಳುವ ಅಧಿಕಾರವಿರುವ ಬ್ರಾಹ್ಮಣರಾದ ನಾವೂ ಕೂಡ ಈ ವಿಷಯಗಳ ಬಗೆಗೆ ಶ್ರದ್ಧೆ ಕಡಿಮೆಯಾಗಿದೆ. ಅದರ ಪರಿಣಾಮವಾಗಿ ಯಜ್ಞದ ಬಗೆಗೆ ಪ್ರಾಥಮಿಕ ಜ್ಞಾನವೂ ಇಲ್ಲದೇ ಇರುವುದು ದುರಂತ. ಈ ಕಾಲಘಟ್ಟದಲ್ಲಿ ನಾವು ಸಂಸ್ಕೃತಿಯ ಪ್ರತಿಯೊಂದು ಮಜಲುಗಳ ಆಳ ಅಗಲಗಳನ್ನು ಸಾಧ್ಯವಾಗುವಷ್ಟು ಅರಿಯುವ ಅಗತ್ಯತೆ ಪ್ರತಿಯೊಬ್ಬ ಬ್ರಾಹ್ಮಣರಿಗೂ ಇದೆ. ಬ್ರಾಹ್ಮಣರಲ್ಲೂ ಹವ್ಯಕರಾದ ನಮಗೆ ಇದರ ಜವಾಬ್ದಾರಿ ಇನ್ನೂ ಹೆಚ್ಚಿದೆ. ಯಾಕೆಂದರೆ ಹವ್ಯಕ ಎನ್ನುವ ಪದದಲ್ಲಿ ಹವ್ಯ ಎನ್ನುವ ಪದ ಅಡಗಿದೆ. ಯಜ್ಞದ ಅರಿವಿನ ಕುತೂಹಲಗಳನ್ನೂ ತಣಿಸಲು ವಿಶ್ವ ಹವ್ಯಕ ಸಮ್ಮೇಳನದಲ್ಲಿ ಯಜ್ಞ ಮಂಟಪ ದರ್ಶನ ವ್ಯವಸ್ಥೆ ಮಾಡಲಾಗಿದೆ.
> ಯಜ್ಞ ಮಂಟಪದಲ್ಲಿ ಏನೇನಿರುತ್ತವೆ?
* 75 ವಿವಿಧ ರೀತಿಯ ಹೋಮಕುಂಡಗಳ ದರ್ಶನ.
* ಆಯಾಯ ಯಜ್ಞಕ್ಕೆ ಬೇಕಾಗುವ ಸಮಿತ್ತು, ಹವಿಸ್ಸುಗಳ ಪ್ರದರ್ಶನ.
* ವಿವಿಧ ರೀತಿಯ ಮಂಡಲಗಳ ದರ್ಶನ.
* ಆಯಾಯಾ ಯಜ್ಞದ ಫಲ ಅಥವಾ ಉದ್ದೇಶ.
* ಆಯಾ ಯಾಗಕ್ಕೆ ಎಷ್ಟು ಋತ್ವಿಜರು ಬೇಕೆನ್ನುವ ಮಾಹಿತಿ.
* ಯಜ್ಞಗಳಲ್ಲಿ ಬಳಸುವ ಸ್ರುಕ್ – ಸ್ರುವ ಮುಂತಾದ ಉಪಕರಣಗಳ ಪರಿಚಯ.
* ಆಯಾಯಾ ಯಾಗಗಳಿಗೆ ಬೇಕಾಗುವ ಸಾಮಾನು ಪಟ್ಟಿ.
* ಆ ಯಾಗ ಮಾಡಿಸಲು ಆಗುವ ಖರ್ಚು ವೆಚ್ಚಗಳ ವಿವರ.
* ದಿನಕ್ಕೊಂದು ಯಾಗದ ಪ್ರಾಮಾಣಿಕ ಪ್ರಾತ್ಯಕ್ಷಿಕೆ.
> ಕಾರ್ಯಕ್ರಮಗಳು ಏನೇನಿರುತ್ತವೆ?
- ಡಿಸೆಂಬರ್ 28 ರಂದು ಗಣಪತಿಹವನ
- 29ರಂದು ಪರಶುರಾಮ ಹವನ
- 30ರಂದು ಧನ್ವಂತರಿ ಹೋಮ
ಬನ್ನಿ ಹವ್ಯವಾಹನನ ಸಂಪ್ರೀತಿಗೂ ದೇವತೆಗಳ ಅನುಗ್ರಹಕ್ಕೂ ವೈದಿಕಪರಂಪರೆಯ ಜ್ಞಾನಕ್ಕೂ ಪಾತ್ರರಾಗೋಣ
ಸಂಚಾಲಕ : ರಾಮಕೃಷ್ಣ ಭಟ್, ಕೂಟೇಲು ಮೊಬೈಲ್ : 98447 41855
ಹೋಮ ಹವನಾದಿಗಳಲ್ಲಿ ಮಂಡಲನಿರೀಕ್ಷೆ ಧಾರ್ಮಿಕ ಮಹತ್ವವುಳ್ಳ ಮತ್ತು ಪವಿತ್ರವಾದ ಕಾರ್ಯಕ್ರಮ. ದೇವಾನು ದೇವತೆಗಳನ್ನು ಭಕ್ತಿ ಪೂರ್ವಕವಾಗಿ ಆಹ್ವಾನಿಸಿ ಅವರಿಗೆಲ್ಲ ಮಂಡಲ ಸ್ವರೂಪದ ಅಸ್ತಿತ್ವವನ್ನು ನೀಡಿ, ಪೂಜಿಸಿ ಯಜ್ಞಕಾರ್ಯಗಳನ್ನು ಪ್ರಾರಂಭಿಸುವುದು ಸಂಪ್ರದಾಯ. ಆ ಸಂದರ್ಭದಲ್ಲಿ ಹಾಕುವ ನಾನಾ ರೀತಿಯ ಮಂಡಲಗಳು ಅತ್ಯಂತ ಸುಂದರವಾಗಿ ಹಾಗೂ ಕಲಾತ್ಮಕವಾಗಿರುತ್ತವೆ. ಅದೊಂದು ಸಾಂಪ್ರದಾಯಿಕ ಶ್ರೇಷ್ಠ ಕಲೆಯೂ ಹೌದು. ಅಮೃತ ಮಹೋತ್ಸವದ ಸಂದರ್ಭದಲ್ಲಿ ಈ ಕಲೆಯ ಪ್ರದರ್ಶನವನ್ನು ಹಾಗೂ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಆಸಕ್ತರು ಭಾಗವಹಿಸುವದಲ್ಲದೆ ಅದಕ್ಕೆ ಸಂಬಂಧ ಪಟ್ಟ ಪರಿಕರಗಳನ್ನು ಸ್ಪರ್ಧಾಳುಗಳೇ ತಂದುಕೊಳ್ಳಬೇಕಾಗಿ ವಿನಂತಿ.
ಒಟ್ಟು ಬಹುಮಾನಗಳು : 10 ಒಟ್ಟು ಮೌಲ್ಯ : 16,000/-
ಮಂಡಲಗಳಿಗೆ ಅಗತ್ಯವಿರುವಷ್ಟು (4 X 4) ಸ್ಥಳವನ್ನು ಒದಗಿಸಲಾಗುವುದು.
ಸಂಚಾಲಕ : ಗಣಪತಿ ಎಸ್. ಹೆಗಡೆ ಮೊಬೈಲ್ : 99800 75463
ವೇದಕಾಲದಿಂದ ಬೆಳದು ಬಂದ ಅಡಕೆ ಕೃಷಿ ಹವ್ಯಕರ ಜೀವನ ಪದ್ಧತಿ. ಅದು ಅವರ ಸಂಸ್ಕೃತಿ. ಕೃಷಿ ಸಂಸ್ಕೃತಿಯನ್ನು ಅಪಾರವಾಗಿ ಪ್ರೀತಿಸುತ್ತಿರುವ ಹವ್ಯಕರಿಗೆ ಅಡಕೆ ಒಂದು ಪೂಜನೀಯ ವಸ್ತುವೂ ಹೌದು. ಜೀವನಾಧಾರವಾದ ಆರ್ಥಿಕ ಬೆಳೆಯೂ ಹೌದು. ಅಡಕೆ ಆಧಾರಿತ ನಾನಾರೀತಿಯ ಔಷಧಿಗಳು, ಮೆಲ್ಲುವ ತಾಂಬೂಲ, ವೀಳ್ಯನೀಡುವ ವಿಶ್ವಾಸ ಮುಂತಾದ ವಿಷಯಗಳು ಸಾಂಸ್ಕೃತಿಕ ಅನನ್ಯತೆಯನ್ನು ಎತ್ತಿ ತೋರಿಸುತ್ತದೆ.
ಇಂತಹ ಅದ್ಭುತ ಇತಿಹಾಸ ಉಳ್ಳ ಅಡಕೆಯ ಸಮಗ್ರ ವಸ್ತು ಪ್ರದರ್ಶನವನ್ನು ಅಮೃತಮಹೋತ್ಸವ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ.
1. ಅಡಕೆಯ ಬೀಜಗಳು – ಸಸಿಗಳು
2. ತೋಟದ ಕೆಲಸದ ಉಪಕರಣಗಳು : ಗುದ್ದಲಿ, ಹಾರೆ, ಪಿಕಾಸಿ, ಕುಡಗೋಲು, ಅರಿದೋಟಿ, ಮಣ್ಣು ಹೊರುವ ಬುಟ್ಟಿ, ಸಿಂಬಿ.
3. ಕೊಳೆ ಔಷಧಿ ಮಿಶ್ರಣ : ಮೈಲು ತುತ್ತ, ಗೋಂದು ಸುಣ್ಣ, ಈಗ ಬಯೋಪೈಟ್
4. ಕೊನೆ ಕೊಯ್ಯುವವನ ಸಲಕರಣೆಗಳು : ದೋಟಿ, ಕಾಲ್ದೆಳೆ, ಕುಳಿತುಕೊಳ್ಳುವ ಕಡಕಿನ ಮಣೆ, ಎದೆ ಪಟ್ಟಿ, ಕತ್ತಿ ಸಿಕ್ಕಿಸಿಕೊಳ್ಳುವ ಕೊಕ್ಕೆ, ನೇಣು ಹಿಡಿಯುವ ಹಗ್ಗ, ಹಾಳೆ ಟೋಪಿ, ಕಲ್ಲಿ.
5. ಅಡಕೆ ಗೊನೆಗಳು : ಕಾಯಡಕೆ, ಹಣ್ಣಡಕೆ, ಕೆರೆಬೆಟ್ಟೆ, ಸಿಪ್ಪೆಗೋಟು.
6. ಅಡಕೆ ಸುಲಿಯುವ ಉಪಕರಣಗಳು : ಮೆಟ್ಕತ್ತಿ, ಹಾಯ್ಗತ್ತಿ
7. ಅಳತೆ ಮಾನದಂಡ : ಸೇರು, ಕೊಳಗ (ಗಿದ್ನ) ಡಬ್ಬ, ಕೆ.ಜಿ
8. ಬೇಯಿಸಿ ಒಣಗಿಸುವ ಸಲಕರಣೆಗಳು : ಹಂಡೆ, ಸೌದೆ, ಬುಟ್ಟಿ, ತೋಡುವ ಬಿದಿರನ ಹುಟ್ಟು, ಬಿದಿರಿನ ತಟ್ಟಿ, ಹುಲ್ಲಿನ ಚಾಪೆ, ಈಗಿನ ಹಳೆಯ ಬ್ಯಾನರ್ಸ್, ಅಡಕೆ ತುಂಬುವ ಗೋಣಿ ಚೀಲ, ಸೊಣಬಿದಾರ, ದಬ್ಬಣ, ಹಳೆಯ ಕಾಲದ ಬಿದಿರಿನ ತಕ್ಕಡಿ.
9. ಅಡಕೆಯ ತರಾವರಿ : ಕೆಂಪಡಿಕೆ, ಬೆಟ್ಟೆ ಅಡಿಕೆ, ಗೋಟಡಕೆ, ಹಣ್ಣಡಕೆ, ಚಾಲಿ, ಕೋಕ, ಜಿಬ್ಬು, ಮಾಣಿ, ಆಪಿ, ಚಿಕಣಿ…
10. ಅಡಕೆ ತೋಟದ ಉಪ ಬೆಳೆಗಳು : ಬಾಳೆ, ಏಲಕ್ಕಿ, ಕಾಳುಮೆಣಸು, ಜಾಯಿಕಾಯಿ, ಲವಂಗ, ವೀಳ್ಯದೆಲೆ, ಶುಂಠಿ, ಅರಿಶಿನ.
11. ಅಡಕೆ ಮರದ ಪ್ರತಿಯೊಂದು ಭಾಗವೂ ನಾನಾ ರೀತಿಯ ಉಪಯೋಗಕ್ಕೆ ಬರುತ್ತದೆ.
12. ಇತ್ತೀಚಿನ ಸಂಶೋಧನಾ ಯಂತ್ರಗಳು
* ಅಡಕೆ ಸುಲಿಯುವ ಯಂತ್ರ
* ಕಳೆ ತೆಗೆಯುವ ಯಂತ್ರ
* ಅಡಕೆ ಒಣಗಿಸುವ ಯಂತ್ರ
* ಕೊಳೆ ಔಷಧಿ ಸಿಂಪಡಿಸುವ ಯಂತ್ರ
13. ಕವಳದ ತಬಕು (ಬಟ್ಳು) : ಹವ್ಯಕರ ಐಡೆಂಟಿಟಿ.
ಹೀಗೆ ಅಡಕೆ ಕೃಷಿಯ ಸಮಗ್ರ ಪ್ರದರ್ಶನವನ್ನು ಬೃಹತ್ ಪ್ರಮಾಣದಲ್ಲಿ ಹಮ್ಮಿಕೊಳ್ಳಲಾಗಿದೆ. ಮೇಲಿನ ವಸ್ತುಗಳ ಮೂಲಕ ಅಡಕೆ ಸಂಸ್ಕೃತಿಯ ಪರಿಚಯವನ್ನು ಸಮಾಜಕ್ಕೆ ತಿಳಿಸುವುದೇ ಇದರ ಮುಖ್ಯ ಉದ್ದೇಶ. ಕೃಷಿಕರು ಮೇಲಿನ ವಸ್ತುಗಳನ್ನು ತರಬೇಕಾಗಿ ವಿನಂತಿ.
ಪ್ರದರ್ಶನಕ್ಕೆ ಒಟ್ಟು ಬಹುಮಾನಗಳು 10. ಒಟ್ಟು ಮೌಲ್ಯ 30,000/-
ಸಂಚಾಲಕ : ಭಾಸ್ಕರ ಹೆಗಡೆ, ಕೊಡಗಿಬೈಲು
ಮೊಬೈಲ್ : 94812 46305
ಸಂಚಾಲಕ : ಚಿದಂಬರ ಭಟ್, ತಲನೀರು
ಮೊಬೈಲ್ : 94482 25795
ಅಧರಕ್ಕೂ ಉದರಕ್ಕೂ ಹಿತವಾದ, ಭೂಸುರಾಮೃತ ಇಕ್ಷುಸಾರ ಕಬ್ಬಿನರಸವು ಸಾರ್ವಕಾಲಿಕ ಸಾರ್ವತ್ರಿಕ ಸುಪೇಯ. ನಮ್ಮ ಮೂಲ ನೆಲೆಗಳಲ್ಲಿ ಕಬ್ಬಿನಗಾಣ/ ಆಲೆಮನೆ ಎಂಬುದು ಒಂದು ಉತ್ಸವ. ಹಬ್ಬ ದಿಬ್ಬಣ ಕಬ್ಬಿನಗಾಣ ಎಲ್ಲವೂ ಸಮನಾದ ಆಕರ್ಷಣೆಯನ್ನು ಹೊಂದಿದೆ. ಹೆಚ್ಚಿನ ಪರಿಶ್ರಮವನ್ನು ಬಯಸುವ ಮತ್ತು ಭೌಗೋಳಿಕ ಸಮಸ್ಯೆಗಳಿಂದಾಗಿ ಊರಕಡೆ ಕಬ್ಬನ್ನು ಬೆಳೆಯುವುದು ಕಡಿಮೆಯಾಗಿ ಆಲೆಮನೆಗಳೂ ವಿರಳದರ್ಶನವಾಗುತ್ತಿವೆ.
ಆಲೆಮನೆಯ ದರ್ಶನ – ಇಕ್ಷುರಸ ಪಾನ
* ಕೋಣಜೋಡಿಯ ಗಾಣ, ಗಾನಸಹಿತ ಪ್ರದಕ್ಷಿಣೆ !
* ಸಹಜ ಸುರಿವ ಹಾಲತೊರೆ, ತಾಜಾ ರಸ ಮಾರಾಟ
* ಗಾಣಕ್ಕೆ ಕಬ್ಬು ಕೊಡುವ ನೋಟ ಮತ್ತು ಸ್ವಾನುಭವ ಅವಕಾಶ
* ವಿವಿಧ ಫ್ಲೇವರ್ಗಳಲ್ಲಿ ಕಬ್ಬಿನಹಾಲು ಸವಿಯುವ ಸದವಕಾಶ
ಕಬ್ಬಿನ ಹಾಲಿನ ಔಷಧೀಯ ಗುಣಗಳ ಮಾಹಿತಿ
* ಬಲದಾಯಕ, ದೇಹ ಪುಷ್ಟಿಕಾರಕ, ಪೌರುಷ ಪ್ರದಾಯಕ, ತೃಪ್ತಿ ನೀಡುವ, ಮೂತ್ರಶೋಧಕ,
* ಉದರದ ಕ್ರಿಮಿನಾಶಕ, ರಕ್ತಪ್ರದ, ಓಜಸ್ಸು ವರ್ಧಕ,
* ಯಕೃತ್ಗೆ ಸಹಾಯಕ, ಜೀರ್ಣಶಕ್ತಿವರ್ಧಕ.
* ಹಲ್ಲಿನಿಂದ ಜಗಿದು ಸೇವಿಸಿದರೆ, ಶೀತಲಗುಣ, ಸಿಹಿರಸ
* ಯಂತ್ರದಿಂದ ರಸತೆಗೆದರೆ, ಉಷ್ಣಗುಣ, ಸಿಹಿಜೊತೆ ಹುಳಿರಸ, ಮಲಬದ್ಧತೆ ಕಾರಕ!
25 ವರ್ಷಗಳ ಹಿಂದಿನ ದಿನಗಳನ್ನ ಒಮ್ಮೆ ಸಿಂಹಾವಲೋಕನ ಮಾಡಿದಾಗ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚು ಕಡಿಮೆ ಪ್ರತೀ ಊರಿನಲ್ಲಿ ಆಲೆಮನೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಅದೊಂದು ಹವ್ಯಕರ ಅವಿಭಾಜ್ಯ ಅಂಗವಾಗಿತ್ತು. ಒಂದರ್ಥದಲ್ಲಿ ಅದು ನಮ್ಮ ಸಂಸ್ಕೃತಿಯೂ ಆಗಿತ್ತು. ಆದರೆ ಈಗ ಅದರ ಸಂಭ್ರಮವನ್ನು ಕಳೆದು ಕೊಳ್ಳುತ್ತಿದ್ದು, ನಶಿಸಿ ಹೋಗುವ ಸ್ಥಿತಿಯಲ್ಲಿದೆ. ಇಂದಿನ ಪೀಳಿಗೆಗೆ ಅದರ ಒಂದು ಅನುಭವವನ್ನು ಕೊಡುವ ದೃಷ್ಟಿಯಿಂದ ಅರೆಮನೆ ಮೈದಾನದಲ್ಲಿ ಆಲೆಮನೆಯ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿದೆ.
ಬನ್ನಿ ಗಾಣ ನೋಡಿ, ಕಬ್ಬಿನ ರಸ ಸವಿಯಿರಿ
ಸಂಚಾಲಕ : ಮಾಧವ ಸೊರಬ
ಮೊಬೈಲ್ : 99646 99955
* ಅಮೋಘ ಸಂಗ್ರಹದ ಅಪರೂಪದ ಪ್ರದರ್ಶನ.
* ಹವ್ಯಕ ಸಂಸ್ಕೃತಿಯು ಅಕ್ಷರ ರೂಪದಲ್ಲಿ ಸಾಕಾರಗೊಂಡ ಕೃತಿಗಳ ಪ್ರದರ್ಶನ.
* ಹವ್ಯಕ ಲೇಖಕರ ಪರಿಚಯ, ಮಾಹಿತಿ ಪುಸ್ತಕಗಳು.
* ಹವ್ಯಕ ಸಾಹಿತಿಗಳೇ ರಚಿಸಿದ ಸುಮಾರು 5000 ಕ್ಕೂ ಮೇಲ್ಪಟ್ಟ ಕೃತಿಗಳು.
* ಹವಿಗನ್ನಡದಲ್ಲೇ ರಚಿಸಿದ ಸಾಹಿತ್ಯ ಗ್ರಂಥಗಳು.
* ಸಂಶೋಧನೆಗೆ ಸಂಬಂಧಪಟ್ಟ ಇತಿಹಾಸ, ಯಕ್ಷಗಾನ, ಮುಂತಾದ ಕೃತಿಗಳು ಸಂಶೋಧಕರಿಗೆ ಆಹಾರವನ್ನು ಒದಗಿಸಲಿವೆ.
* ಕಳೆದು 53 ವರ್ಷಗಳ ಹವ್ಯಕ ಮಾಸ ಪತ್ರಿಕೆ ಪ್ರದರ್ಶನ.
* ರಾಜ್ಯ, ರಾಷ್ಟ್ರ ಮತ್ತು ಹೊರ ದೇಶಗಳಲ್ಲಿ ಪ್ರಕಟವಾಗುತ್ತಿರುವ ಹವ್ಯಕ ಪತ್ರಿಕೆಗಳ ಬೃಹತ್ ಪ್ರದರ್ಶನ.
* ಇವಿಷ್ಟು ಸಂಗ್ರಹಗಳು ಮಹಾಸಭೆಯ ನೂತನ ಕಟ್ಟಡದಲ್ಲಿ ಪ್ರಾರಂಭವಾಗಿರುವ ಗ್ರಂಥಾಲಯದಲ್ಲಿ ಸರಸ್ವತಿಯ ಸನ್ನಿಧಿಯಂತೆ ನೆಲೆಗೊಂಡಿದೆ. ಸುಮಾರು 7000ಕ್ಕೂ ಮೀರಿದ ಪುಸ್ತಕಗಳನ್ನು ಒಳಗೊಂಡ ಈ ಗ್ರಂಥಾಲಯ ಒಂದು ಅಪರೂಪದ ಗ್ರಂಥಭಂಡಾರವಾಗಿ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಹೊಂದಿದೆ.
* ಅರಮನೆಯ ಮೈದಾನದಲ್ಲಿ ಮೂರು ದಿವಸಗಳ ಕಾರ್ಯಕ್ರಮದಲ್ಲಿ ಪ್ರದರ್ಶನಗೊಳ್ಳಲಿರುವ ಈ ಪುಸ್ತಕ ಮೇಳವನ್ನು ಕಣ್ಣಾರೆ ನೋಡಿ, ಪುಸ್ತಗಳನ್ನು ಕೊಂಡು ಓದಿ, ಪುಸ್ತಕ ಸಂಸ್ಕೃತಿಯನ್ನು ಬೆಳೆಸಿ, ಮಹಾಸಭೆಯ ಈ ಅಭೂತ ಪೂರ್ವ ಯೋಜನೆಗೆ ಸಕಾರಾತ್ಮಕವಾಗಿ ಸ್ಪಂಧಿಸಿ.
ಸಂಚಾಲಕ : ಶ್ರೀ ಜಿ. ಎಸ್. ಹೆಗಡೆ, ಮೂರೂರು
ಮೊಬೈಲ್ : 94484 23364 / 63605 10270
ಸಂಚಾಲಕ (ಮಾರಾಟ) : ವಿ.ಪಿ. ಹೆಗಡೆ
ಮೊಬೈಲ್ : 94839 49460
ಬಾಲಸ್ತಾವತ್ ಕ್ರೀಡಾಸಕ್ತಃ… ಮಕ್ಕಳು ಆಟೋಟಗಳಲ್ಲಿ ಉತ್ಸುಕರಾಗಿರುವುದು ಸಹಜ. ಮಹಾನಗರದಲ್ಲಿ ಮಕ್ಕಳಿಗೆ ಅಂಥ ಹೊರಾಂಗಣ ಅವಕಾಶ ದುರ್ಲಭ. ಬಹುವಿಧ ಎಲೆಕ್ಟ್ರಾನಿಕ್ ಗೆಜೆಟ್ಗಳಿಂದಾಗಿ, ಸಮಾಜಿಕ ಮಾಧ್ಯಮಗಳ ಪ್ರಭಾವ ಮತ್ತು ಲಭ್ಯತೆಯಿಂದಾಗಿ ಆಟಗಳೆಲ್ಲವೂ ಒಳಾಂಗಣವೇ ಆಗಿದೆ. ನಮ್ಮ ಹಳ್ಳಿಗಳೂ ಸಹ ಇಂಥ ಪ್ರಭಾವಕ್ಕೊಳಗಾಗುತ್ತಿವೆ. ಮಹೋತ್ಸವಕ್ಕೆ ಆಗಮಿಸಿದ ಸಮಾಜಬಂಧುಗಳ ಮಕ್ಕಳು ಮೊಮ್ಮಕ್ಕಳು ಸಂತೋಷದಲ್ಲಿ ತನ್ಮಯರಾಗಲು ವಿವಿಧ ಆಟಗಳು ಮತ್ತು ಬೃಹತ್ಗೊಂಬೆಗಳ ಕುಣಿತವನ್ನು ಆಯೋಜಿಲಾಗುತ್ತದೆ.
* ವಿವಿಧ ವರ್ಣಗಳ, ಜಾನಪದೀಯ ಗೊಂಬೆಗಳು ಓಡಾಡಲಿವೆ, ಕುಣಿದಾಡಲಿವೆ.
* ಮಕ್ಕಳಿಗೆ ಗೊಂಬೆಗಳೊಂದಿಗೆ ಕಲೆತು ಆಡಲು ಅವಕಾಶ. ದೊಡ್ಡವರಿಗೆ ಸೆಲ್ಫೀ ಸೇವೆಗೆ ಸದವಸರ.
* ಆನೆ, ಕುದುರೆ, ಒಂಟೆಗಳ ಸವಾರಿಯ ಸೌಲಭ್ಯ. ಎತ್ತಿನ ಬಂಡಿಯ ಪ್ರಯಾಣ.
ಸಂಚಾಲಕಿ : ಕಮಲಾಕ್ಷಿ ಹೆಗಡೆ, ದುಗ್ಗೂರು
ಮೊಬೈಲ್ : 99169 12953
ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಹೊರತರುವುದೇ ಸ್ಪರ್ಧೆಗಳ ಉದ್ದೇಶ. ಆ ಉದ್ದೇಶಕ್ಕೊಂದು ವೇದಿಕೆಯನ್ನು ಅಮೃತ ಮಹೋತ್ಸವ ಮತ್ತು ವಿಶ್ವ ಹವ್ಯಕ ಸಮ್ಮೇಳನಲ್ಲಿ ಒದಗಿಸಲಾಗುವುದು.
ಚಿತ್ರಕಲೆ ಸ್ಪರ್ಧೆ : 3 ರಿಂದ 7 ವರ್ಷದ ಮಕ್ಕಳಿಗೆ ಬಣ್ಣತುಂಬುವ ಸ್ಪರ್ಧೆ ಮತ್ತು 8 ರಿಂದ 16 ವರ್ಷದ ಮಕ್ಕಳಿಗೆ ‘ಚಿತ್ರಕಲೆ’ ಸ್ಪರ್ಧೆ ಏರ್ಪಡಿಸಲಾಗಿದೆ.
ಸ್ಪರ್ಧೆ ವಿವರ ಮತ್ತು ನಿಬಂಧನೆಗಳು
1. ಹವ್ಯಕ ಸ್ಪರ್ಧಾತಿಗಳಿಗೆ ಮಾತ್ರ ಅವಕಾಶ
2. ಬಣ್ಣ ತುಂಬುವ ಸ್ಪರ್ಧೆಗೆ (ಹವ್ಯಕ ಸಂಸ್ಕೃತಿ) ಮಾತ್ರ ಕೊಡಲಾಗುವುದು.
3. ಚಿತ್ರಕಲೆ ಸ್ಪರ್ಧೆಯ ವಿಷಯ ಹವ್ಯಕ ಸಂಸ್ಕೃತಿ ಹವ್ಯಕ ಸಂಸ್ಕೃತಿ ಬಿಂಬಿಸುವ ಯಾವುದೇ ಚಿತ್ರವನ್ನು ಬಿಡಿಸಬಹುದು.
4. ಚಿತ್ರಕಲಾ ಸ್ಪರ್ಧೆಯ ಹಾಳೆ ಮತ್ತು ಬಣ್ಣವನ್ನು ಸ್ಪರ್ಧಾತಿಗಳೇ ತರಬೇಕು.
5. ಸ್ಪರ್ಧೆಯ ದಿನಾಂಕ 28, 29 ಮತ್ತು 30 ಡಿಸೆಂಬರ್ 2018, ಸಮಯ ಬೆಳಗ್ಗೆ 11 ರಿಂದ 12, 3 ದಿನವೂ ಸಹಾ ಸ್ಪರ್ಧೆ ನಡೆಯಲಿದೆ.
6. ಒಂದು ಸ್ಪರ್ಧೆಗೆ ಒಂದು ದಿನ ಮಾತ್ರ ಅವಕಾಶ
7. ಪ್ರತಿ ದಿನವೂ ಪ್ರತಿ ವಿಭಾಗಗಳಲ್ಲಿ 10 ಬಹುಮಾನಗಳಿರುತ್ತದೆ.
ಸಂಚಾಲಕ : ಸತೀಶ್ ರಾವ್
ಮೊಬೈಲ್ : 98453 48123
* ಯಾವುದೇ ಮಹೋತ್ಸವ, ಸಮ್ಮೇಳನಗಳಿಗೆ ಗೋಷ್ಠಿಗಳೇ ಜೀವಾಳ. ಹವ್ಯಕ ಸಮಾಜಕ್ಕೆ ಸಂಬಂಧಿತ ವಿಚಾರಗಳ ವಿಮರ್ಶೆ-ಪರಾಮರ್ಶೆ, ಚಿಂತನ-ಮಂಥನ ಅರ್ಥವತ್ತಾಗಿ ನಡೆಯಲಿವೆ.
* ಎಂಟು ಗಂಟೆಗಳ ಅವಧಿಯಲ್ಲಿ 9 ಗೋಷ್ಠಿಗಳು, 24 ವಿಷಯಗಳು!
* ತತ್ಸಂಬಂಧೀ ವಿಚಾರಗಳ ತಜ್ಞರು, ನುರಿತ ಭಾಷಣಗಾರರು, ಅನುಭವಿಗಳು ಹಾಗೂ ವಿಷಯ ನಿಪುಣರ ಒಕ್ಕೊರಲಿನ ವಿದ್ವತ್ಪೂರ್ಣ ಮಂಡನೆಗಳು ಸಮಾಜವನ್ನು ಉತ್ತುಂಗಕ್ಕೆ ಒಯ್ಯಲು ದಿಕ್ಸೂಚಿಗಳಾಗಲಿವೆ.
* ಅಮೃತ ಮಹೋತ್ಸವದಂದು ಹವ್ಯಕರ ಇತಿಹಾಸ, ಇಂದಿನ ಸ್ಥಿತಿ, ಮುಂದಿನ ಪಥಗಳ ಚರ್ಚೆ ನಡೆದರೆ, ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹವ್ಯಕರ ಸಾಧನಾ ಕ್ಷೇತ್ರಗಳು ಲೋಕದೆದುರು ತೆರೆದುಕೊಂಡು ಸಮಾಜದಲ್ಲಿ ಗೌರವಪೂರ್ಣ ಸ್ಥಾನವನ್ನು ಉಳಿಸಿ ಬೆಳೆಸಲು ಸಹಕಾರಿಯಾಗಲಿವೆ.
* ಗೋಷ್ಠಿಗಳ ವಿಷಯಗಳನ್ನು ನೋಡಿದರೆ ಎಲ್ಲವೂ ಸ್ವಯಂವೇದ್ಯ.
* ಹವ್ಯಕರ ಇತಿಹಾಸ – ಸಾಗಿಬಂದ ದಾರಿ
* ಮಹಾಸಭಾದ 75 ವರ್ಷ
* ಹವ್ಯಕರ ಇಂದಿನ ಸ್ಥಿತಿ ಗತಿ
* ಹವ್ಯಕರ ಮುಂದಿರುವ ಸಮಸ್ಯೆ – ಸವಾಲುಗಳು
* ಪರಿಹಾರದ ಹಾದಿ – ಮುಂದಿನ ದಾರಿ
* ಸಮಾಜದ ಆಶಯಗಳು
* ಹವ್ಯಕರ ಹಬ್ಬ, ಧಾರ್ಮಿಕ ಆಚರಣೆಗಳು
* ಹವ್ಯಕರ ಮಠ-ದೇವಸ್ಥಾನಗಳು
* ವೈದಿಕ ವೃತ್ತಿ-ಪುರೋಹಿತರು-ಮನೆತನ
* ಹವ್ಯಕ ಸಂಪ್ರದಾಯ, ಪರಂಪರೆ, ಪರಿಸರ
* ಹವ್ಯಕರ ಉಪನಯನಾದಿ ಸಂಸ್ಕಾರಗಳು
* ಹವ್ಯಕರ ಹವ್ಯಾಸ, ಜೀವನಶೈಲಿ
* ಹವ್ಯಕರ ಕಲೆ, ಕಲಾವಿದರು
* ಯಕ್ಷಗಾನ, ಸಂಗೀತ, ಅಭಿನಯ ಕಲಾವಿದರು
* ಹವ್ಯಕರ ರುಚಿ-ಪಾಕ-ಆಹಾರ
* ಹವ್ಯಕರ ಶಿಕ್ಷಣ, ಮಾಧ್ಯಮ, ಸಂಶೋಧನೆ
* ಹವ್ಯಕ ಸಾಹಿತ್ಯ-ಭಾಷೆ, ಲೇಖಕ, ಗ್ರಂಥ
* ಹವ್ಯಕರ ಕೃಷಿ-ಸಹಕೃಷಿ
* ಹೊರರಾಜ್ಯ, ವಿದೇಶಗಳಲ್ಲಿ ಹವ್ಯಕರು
* ಹವ್ಯಕ ಯೋಧರು, ಸ್ವಾತಂತ್ರ್ಯ ಸೇನಾನಿಗಳು
* ಹವ್ಯಕ ಯುವ ಸಮುದಾಯ, ಕ್ರೀಡಾಕ್ಷೇತ್ರ
* ಹವ್ಯಕರ ಉದ್ಯಮ, ಕೈಗಾರಿಕೆ
* ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಹವ್ಯಕರು
* ವೃತ್ತಿಪರ ಹವ್ಯಕರು
ಸಂಚಾಲಕರು
ಆದಿತ್ಯ ಹೆಗಡೆ, ಕಲಗಾರು
ಮೊಬೈಲ್ : 95357 31255
ಮಂಜುನಾಥ ಬಿ.ಜಿ.
ಮೊಬೈಲ್ : 78991 61161
ವಂದನಾ ಕೈಂತಜೆ
ಮೊಬೈಲ್ : 98456 48693
ವೈವಿಧ್ಯಮಯ ರಂಗದಲ್ಲಿ ವಿಶೇಷವಾದ ಪ್ರತಿಭೆಗಳನ್ನು ಅನಾದಿಕಾಲದಿಂದಲೂ ಮೆರೆಯುತ್ತಾ ಬರುತ್ತಿರುವುದು ಹವ್ಯಕರಾದ ನಮ್ಮ ಹೆಗ್ಗಳಿಕೆ. ಶ್ರೀ ಅಖಿಲ ಹವ್ಯಕ ಮಹಾಸಭಾದ ಅಮೃತ ಮಹೋತ್ಸವ ಮತ್ತು ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದ ಈ ಸಂದರ್ಭದಲ್ಲಿ ಛಾಯಾ ಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಭಾಗವಹಿಸಲಿಚ್ಛಿಸುವ ಛಾಯಾಗ್ರಾಹಕರು ಈ ಕೆಳಗಿನ ಸೂಚನೆ ನಿಯಮಗಳನ್ನು ಗಮನಿಸಿರಿ.
1. ವಿಷಯ : ಹವ್ಯಕ ಸಂಪ್ರದಾಯ ಜೀವನ ಶೈಲಿ
2. ಸ್ಪರ್ಧಿಗಳು ಹವ್ಯಕರಾಗಿರಬೇಕು.
3. ಯಾವುದೇ ಪ್ರವೇಶ ಶುಲ್ಕವಿಲ್ಲ.
4. ಡಿಜಿಟಲ್ ಮಾದರಿಯ ಚಿತ್ರಗಳಿಗೆ ಅವಕಾಶ. ಪ್ರಿಂಟ್ಗಳನ್ನು ಸ್ವೀಕರಿಸಲಾಗುವುದಿಲ್ಲ. ಮೊಬೈಲ್ಗಳಲ್ಲಿ ತೆಗೆದ ಚಿತ್ರ ಪರಿಗಣಿಸಲಾಗುವುದಿಲ್ಲ.
5. ಛಾಯಾ ಚಿತ್ರ ಪೂರ್ತಿ ಸ್ವಂತದ್ದಾಗಿರಬೇಕು.
6. ಛಾಯಾ ಚಿತ್ರಗಳು ಚಿತ್ರಗ್ರಾಹಕರ ಸಂಪೂರ್ಣ ಸ್ವಾಮ್ಯವನ್ನು ಹೊಂದಿರಬೇಕು. ಇತರ ಯಾವುದೇ ಕಾಪಿರೈಟ್ನಿಂದ ಮುಕ್ತವಾಗಿರಬೇಕು.
7. ಯಾವುದೇ ಕಾಪಿರೈಟ್ ಸಮಸ್ಯೆ ಎದುರಾದಲ್ಲಿ ಚಿತ್ರಗಳನ್ನು ಕಳಿಸಿದವರೇ ಸಂಪೂರ್ಣ ಹೊಣೆಗಾರರಾಗಿರುತ್ತಾರೆ.
8. ಮೊದಲ ಹಂತದಲ್ಲಿ ಡಿಜಿಟಲ್ ಮಾದರಿಯ 1MB ಗಾತ್ರದ ಚಿತ್ರಗಳನ್ನು ಆಯ್ಕೆಗಾಗಿ ಕಳುಹಿಸಬೇಕು. ಅಗತ್ಯವಿದ್ದಲ್ಲಿ RAW ಅಥವಾ NEF ಮೂಲಪ್ರತಿಗಳನ್ನು ಒದಗಿಸಲು ಸಿದ್ಧರಿರಬೇಕು.
9. ಒಬ್ಬರು ಹೆಚ್ಚೆಂದರೆ 5 ಛಾಯಾ ಚಿತ್ರಗಳನ್ನು ಕಳುಹಿಸಬಹುದು.
10. ಚಿತ್ರಗಳನ್ನು ಈ ವಿಳಾಸಕ್ಕೆ ಇಮೈಲ್ ಮುಖಾಂತರ ಡಿಸೆಂಬರ್ 15, 2018 ರ ಒಳಗಾಗಿ ತಲುಪುವಂತೆ ಕಳುಹಿಸಬೇಕು. shrihavyaka@gmail.com. ಅನಂತರ ಬಂದವುಗಳನ್ನು ಪರಿಗಣಿಸಲಾಗುವುದಿಲ್ಲ.
11. ಆಯ್ಕೆಯಾದ ಕೆಲವು ಚಿತ್ರಗಳಿಗೆ ಮಾತ್ರವೇ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಅವಕಾಶವಿರುತ್ತದೆ. ಆಯ್ಕೆಗಾರರ ನಿಧರ್ಾರವೇ ಅಂತಿಮ.
12. ಇಮೈಲ್ ಕಳುಹಿಸುವಾಗ ಮೈಲ್ ಸಬ್ಜೆಕ್ಟ್ `ಹವ್ಯಕ ಚಿತ್ರ ಛಾಯಾ’ ಎಂದು ನಮೂದಿಸಿರಬೇಕು. ಭಾಗವಹಿಸುವವರ ಹೆಸರು, ಮಹಾಸಭಾದ ಸದಸ್ಯತ್ವ ಸಂಖ್ಯೆ, ವಿಳಾಸ, ಮತ್ತು ದೂರವಾಣಿ ಸಂಖ್ಯೆ – ಇವುಗಳನ್ನು ನಮೂದಿಸುವುದು ಕಡ್ಡಾಯ.
13. ಕಳುಹಿಸಿದ 2 ದಿನಗಳೊಳಗಾಗಿ `ತಲುಪಿದೆ’ (Received) ಎಂಬ ಪ್ರತ್ಯುತ್ತರ ಬಾರದಿದ್ದಲ್ಲಿ ಮಾತ್ರವೇ ಇಮೈಲ್ ಅಥವಾ ದೂರವಾಣಿ 080-23348193 ಮೂಲಕ ಮಹಾಸಭೆಯನ್ನು ಸಂಪರ್ಕಿಸಬಹುದು .
14. ಚಿತ್ರಗಳಿಗೆ ಫೈಲ್ ನೇಮ್ ಸ್ಪರ್ಧಿಗಳ ಹೆಸರು ಮತ್ತು ಅದರ ಕೊನೆಯಲ್ಲಿ 1,2,3….5 ಎಂದು ನಮೂದಿಸಿರಬೇಕು.
15. ಚಿತ್ರವು ಪ್ರದರ್ಶನಕ್ಕೆ ಆಯ್ಕೆಯಾದಲ್ಲಿ ಅನಂತರ 20, 30 ಇಂಚು ಗಾತ್ರದಲ್ಲಿ 200 ಡಿ.ಪಿ.ಐ ರೆಸೊಲ್ಯೂಶನ್ ಹೊಂದಿದ ಜೆ.ಪಿ.ಜಿ. ಫೈಲ್ನ್ನು ಕಳುಹಿಸಬೇಕಾಗುತ್ತದೆ. ಇದಕ್ಕಿಂತ ಕಡಿಮೆ ಇರುವವುಗಳನ್ನು ಆಯ್ಕೆಯಾಗಿದ್ದರೂ ಪರಿಗಣಿಸಲಾಗುವುದಿಲ್ಲ.
Post-processing for Natural Presentation permitted – Techniques that enhance the presentation of the photograph while preserving the story, original scene and the pictorial content are permitted. This includes basic post-processing techniques such as Cropping, Burning, Dodging, Exposure correction, hue/saturation adjustments, sharpening and noise reduction, and advanced techniques such as spot removal, HDR, Luminosity Masks and Focus Stacking. Final image presented must appear natural.
Post-processing that changes the scene are not permitted – Techniques that add, relocate, replace, or remove pictorial elements (except by cropping) are NOT permitted. Stitching and making composite images, not falling under the advanced techniques listed above, are NOT permitted
17. ಚಿತ್ರಗಳ ಮೇಲೆ ಯಾವುದೇ ಲಾಂಛನ ಅಥವಾ ವಾಟರ್ ಮಾಕರ್್ ಹೆಸರು ಇತ್ಯಾದಿಗಳು ಇರಬಾರದು.
18. ಪ್ರದರ್ಶನಗೊಳ್ಳುವ ಚಿತ್ರಗಳ ಹತ್ತು ವಿಜೇತರಿಗೆ ಪುರಸ್ಕಾರಗಳನ್ನು ನೀಡಲಾಗುವುದು. ಅದರ ಒಟ್ಟು ಮೊತ್ತ ರೂ. 16,000/-.
19. ಒಬ್ಬರು ಒಂದು ಪುರಸ್ಕಾರಕ್ಕಷ್ಟೇ ಅರ್ಹರಾಗಿರುತ್ತಾರೆ.
20. ಆಯ್ಕೆಗೊಂಡ ಸ್ಪರ್ಧಿಗಳಿಗೆ ಡಿಸೆಂಬರ್ 20ನೇ ತಾರೀಖಿನೊಳಗಾಗಿ ಇಮೈಲ್ ಮೂಲಕ ತಿಳಿಸಲಾಗುವುದು.
21. ಎಲ್ಲಾ ವಿಚಾರಗಳಲ್ಲೂ ತೀರ್ಪುಗಾರರ ನಿರ್ಣಯವೇ ಅಂತಿಮ.
22. ಯಾವುದೇ ಚಿತ್ರವನ್ನು ಯಾವುದೇ ಕಾರಣಗಳನ್ನು ನೀಡದೇ, ತಿರಸ್ಕರಿಸುವ ಹಕ್ಕೂ ಸಮಿತಿಗೆ ಇರುತ್ತದೆ. ಈ ವಿಚಾರವಾಗಿ ಚರ್ಚೆಗೆ ಅವಕಾಶವಿರುವುದಿಲ್ಲ.
ಸಂಚಾಲಕ : ಸಿ.ಎ ಗಿರಿಧರ, ಕಲಗಾರು
ಮೊಬೈಲ್ : 94482 27287
ಮನುಕುಲದ ಉಗಮ ವಿಕಾಸದ ಜೊತೆಗೆ ಕಲೆಯ ಉಗಮವಾಯಿತು. ಮಾನವ ಸಮಾಜ ಜೀವಿಯಾಗಿ, ಬೌದ್ಧಿಕ ಕಸರತ್ತಿನ ಮೂಲಕ, ಮನೋರಂಜನೆಯೊಂದಿಗೆ ವಿವಿಧ ಕಲೆಗಳಿಗೆ ಹುಟ್ಟು ಹಾಕಿದನು. ಸಾಮವೇದವು ಕಲೆಗಳ ಕುರಿತು ಅಧಿಕೃತ ಉಲ್ಲೇಖ ಹೊಂದಿದೆ. ವಸ್ತು ಪ್ರಧಾನ ಕಲೆಗಳಲ್ಲಿ ಪಾತ್ರೆ, ಮಡಕೆ, ಗೊಂಬೆ ಇನ್ನಿತರ ಕರಕುಶಲಕಲೆಗಳು ಬಂದರೆ, ಭಾವಪ್ರಧಾನ ಕಲೆಗಳಲ್ಲಿ ಪಂಚಕಲೆಗಳಾದ ಸಂಗೀತ, ನೃತ್ಯ, ಚಿತ್ರಶಿಲ್ಪ, ಹಾಗೂ ಸಾಹಿತ್ಯ ಕಲೆಗಳು, ಕರಕುಶಲ ಕಲೆಗಳಲ್ಲಿ ಮುಖ್ಯವಾದವು. ಬಿದಿರಿನ ಕಲೆ, ಹಚ್ಚೆ, ರಂಗೋಲಿ, ಕೌದಿಕಲೆ, ಪಿಂಗಾಣಿ ಕಲೆ, ಕಸೂತಿ ಕಲೆ, ಜನಪದ ಶೈಲಿಯ ನೇಯ್ಗೆ, ಕಾಷ್ಠ ಕಲೆಗಳು ಇತ್ಯಾದಿ.
ಇಂತಹ ಕರಕೌಶಲದಿಂದ ಉತ್ಪಾದಿತವಾದ ವಸ್ತುಗಳನ್ನು ಪ್ರದರ್ಶಿಸುವ ಅವಕಾಶವನ್ನು ಈ ಮಹೋತ್ಸವದಲ್ಲಿ ಕಲ್ಪಿಸಲಾಗಿದೆ.
* ಇದು ಹವ್ಯಕರ ಕೈ ಕೌಶಲ್ಯದಿಂದ ತಯಾರಿಸಲ್ಪಟ್ಟ ವೈವಿಧ್ಯಮಯ ಕಣ್ಸೆಳೆಯುವ ಅಮೋಘ ವಸ್ತು ಪ್ರದರ್ಶನ !!!
* ಅಬ್ಬಬ್ಬಾ ಅಷ್ಟು ಚೆನ್ನಾಗಿರುತ್ತಾ ? ಹೌದು ಇಲ್ಲಿದೆ ಕೈ ಚಳಕ, ಬುದ್ಧಿ ಪ್ರಚೋದಕ, ಜ್ಞಾನ ಪ್ರತೀಕ, ಪರಿಸರ ಪೂರಕ, ಸಾಂಪ್ರದಾಯಿಕ, ಮನಸ್ಸಿಗೆ ಪುಳಕ, ನೋಟಕ್ಕೆ ರಸಪಾಕ, ಸಂಸ್ಕೃತಿಗೆ – ಪೋಷಕ, ಕಣ್ಣಿಗೆ ಆನಂದದಾಯಕ …. ನೆನಪು ರೋಚಕ !
* ಹವ್ಯಕರ ಕರ ಕುಶಲ ವಸ್ತುಗಳು ಏನೇನು ಅಂತೀರಾ………….. ಒಮ್ಮೆ ಇಣುಕಿರಿ ಅರಮನೆಯ ಮೈದಾನಕ್ಕೆ !
* ಅರೆರೆರೆ ……ಇದುವರೆಗೆ ಇಂತಹ ಕರಕುಶಲ ಕಲಾ ನೋಟವನ್ನು ನೋಡೇ ಇರಲಿಲ್ಲ…..ಶಹಬ್ಬಾಸ್ …….
* ಕಸದಿಂದ ರಸವೇ? ಅದ್ಭುತ …..ಅತ್ಯದ್ಭುತ……!!!ತ್ಯಾಜ್ಯದಿಂದ ಸದ್ಭಳಕೆ ……ತಿಳಿಯಲೇ ಬೇಕು! ಕಲಿಯಲೇ ಬೇಕು !!
ಕರಕುಶಲ ವಸ್ತು ಪ್ರದರ್ಶನ ಮಾರಾಟಗಾರರಿಗೆ ಕೆಲವು ಮಾಹಿತಿಗಳು
ಒಂದು ಟೇಬಲ್ಗೆ ಬಾಡಿಗೆ ಶುಲ್ಕ – ರೂ. 5000/- (ಮೂರು ದಿನಕ್ಕೆ)
ಎರಡು ಟೇಬಲ್ಗಳಿಗೆ ಬಾಡಿಗೆ ಶುಲ್ಕ – ರೂ. 9000/- (ಮೂರು ದಿನಕ್ಕೆ)
ಸ್ಪರ್ಧೆಯ ಬಹುಮಾನಗಳು : ಒಟ್ಟು ಮೊತ್ತ ರೂ.30,000/-, ಒಟ್ಟು ಹತ್ತು ಬಹುಮಾನಗಳಿವೆ.
ಈ ಪ್ರದರ್ಶನ ಕೇವಲ ಮಾರಾಟ ದೃಷ್ಟಿಯಿಂದಲ್ಲ, ಹವ್ಯಕರ ಕಲೆ, ಹಾಗೂ ಸಂಸ್ಕೃತಿಯನ್ನು ಜನರಿಗೆ ಪರಿಚಯ ಮಾಡುವ ಉದ್ದೇಶವೇ ಇಲ್ಲಿಯ ಮಹತ್ವ. ಈ ಸಮ್ಮೇಳನಕ್ಕೆ ಅದು ಕೊಡುಗೆಯೂ ಹೌದು.
ನಿಮಗೂ ಒಂದು ಸದವಕಾಶ : ಭೇಟಿ ನೀಡಿ ಭಾಗವಹಿಸಿ.
ನೀವು ನಿಮ್ಮ ಬಂಧುಗಳು ಈ ಕೌಶಲ ಮತ್ತು ಅಭ್ಯಾಸವನ್ನು ಹೊಂದಿದ್ದರೆ ನಿಮ್ಮ ಉತ್ಪಾದನೆಗೆ ಪ್ರದರ್ಶನ ಮತ್ತು ಮಾರಾಟಕ್ಕೂ ಅವಕಾಶವಿದೆ. ಆಸಕ್ತರು ಸಂಚಾಲಕರನ್ನು ಸಂಪರ್ಕಿಸಿ ನಿಶ್ಚಯಿಸಿಕೊಳ್ಳಿ.
* ಕರಕುಶಲ ಕಲೆಯನ್ನು ಮೆಚ್ಚೋಣ, ಪ್ರೋತ್ಸಾಹಿಸೋಣ, ಅಚ್ಚರಿ ಪಡೋಣ, ಉಳಿಸೋಣ, ಬೆಳೆಸೋಣ, ಬಳಸೋಣ
ಸಂಚಾಲಕ : ಶ್ರೀ ಶ್ರೀವತ್ಸ , ಭೀಮನಕೋಣೆ
ಮೊಬೈಲ್ : 98800 06162
ಜೀವನದಲಿ ಕಲೆಯೋ, ಕಲೆಯೋಕೆ ಜೀವನವೋ ???
ಹವ್ಯಕರಲ್ಲಿರುವ ಪ್ರತಿಭಾವಂತ ಚಿತ್ರಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಮೃತಮಹೋತ್ಸವ ಮತ್ತು ದ್ವಿತೀಯ ವಿಶ್ವಹವ್ಯಕ ಸಮ್ಮೇಳನದಲ್ಲಿ ಕಲಾ ಕುಂಚ (ಪೇಂಟಿಂಗ್ ಸ್ಪರ್ಧೆ) ಏರ್ಪಡಿಸಲಾಗಿದೆ.
ಸ್ಪರ್ಧೆ ವಿವರ ಮತ್ತು ನಿಬಂಧನೆಗಳು
* 16 ವರ್ಷ ಮೇಲ್ಪಟ್ಟ ಹವ್ಯಕ ಸ್ಪರ್ಧಾಳುಗಳಿಗೆ ಮಾತ್ರ ಅವಕಾಶ
* ಪೇಂಟಿಂಗ್ ಮನೆಯಲ್ಲಿ ಮಾಡಿಕೊಂಡು ಬರಬೇಕು
* ಸ್ಪರ್ಧೆಯ ದಿನಾಂಕ 28 ಡಿಸೆಂಬರ್ 2018 ಶನಿವಾರ ಬೆಳಗ್ಗೆ 10.30 ಕ್ಕೆ
* ಪ್ರತಿ ಸ್ಪರ್ಧೆಗೆ ಒಂದು ಪೇಂಟಿಂಗ್ಗೆ ಮಾತ್ರ ಅವಕಾಶ
* ಸ್ಪರ್ಧೆಯಲ್ಲಿ ಉತ್ತಮ ಹತ್ತು ಪೇಂಟಿಂಗ್ಗಳಿಗೆ ಬಹುಮಾನವಿರುತ್ತದೆ.
* ಪೇಂಟಿಂಗ್ನ ಅಳತೆ 2 X 3 ಕೆ ಕಡಿಮೆ ಇರದಂತೆ 3 X 4 ಮೀರದಂತೆ ಇರಬೇಕು.
* ಕ್ಯಾನ್ವಾಸ್ / ಪೇಪರ್ ಪೇಂಟಿಗ್ ಮಾತ್ರ ಅವಕಾಶ ಹಾಗೂ ಪ್ರೇಮ್ ಹಾಕುವುದು ಕಡ್ಡಾಯ
* ವಾಟರ್ ಪೇಂಟ್, ಆಯಿಲ್ ಪೇಂಟ್, ಅಕ್ರಾಲಿಕ್ ಪೇಂಟಿಂಗ್ ಚಿತ್ರಗಳಿಗೆ ಅವಕಾಶ
* ಪೇಂಟಿಂಗ್ ವಿಷಯ (Concept) ಸ್ಪರ್ಧೆಯ ಆಯ್ಕೆಯಾಗಿರುತ್ತದೆ. ಯಾವುದೇ ನಿಬಂಧನೆಗಳಿಲ್ಲ.
* ಪೆಂಟಿಂಗ್ ಸ್ವಂತದ್ದಾಗಿರಬೇಕು
* ಪೇಂಟಿಂಗ್ ನ ಹಿಂಬಾಗದಲ್ಲಿ ಸ್ಪರ್ಧಾರ್ತಿಯ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯ ಮಾಹಿತಿಯನ್ನು ನೀಡಿರಬೇಕು.
* ಪೇಂಟಿಂಗ್ನ್ನು ದಿನಾಂಕ : 28,29 ಮತ್ತು 30 ರಂದು ಪ್ರದರ್ಶನಕ್ಕೆ ಇಡಬೇಕು.
* ಆಯ್ಕೆ ಸಮಿತಿಯ ತೀರ್ಮಾನ ವೇ ಅಂತಿಮ
ಸಂಚಾಲಕ : ಪರಮೇಶ್ವರ ಎನ್
ಮೊಬೈಲ್ : 98860 44383, 97400 77383
* ಅಮೃತ ಮಹೋತ್ಸವ ಹಾಗೂ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ನಡೆಯುವ ಅರಮನೆ ಮೈದಾನದಲ್ಲಿ ಮೂರು ದಿನಗಳ ಸಂಭ್ರಮಾಚರಣೆಯ ಮಧ್ಯೆ ಕೊಂಚ ಬಿಡುವಿನ ವೇಳೆಯಲ್ಲಿ ವಾಣಿಜ್ಯ ಮಳಿಗೆಗಳಿಗೆ ಒಂದುಸುತ್ತು ಬಂದರೆ ಮನಸ್ಸು ಉಲ್ಲಸಿತವಾದೀತು.
* ಹವ್ಯಕರ ಹಬ್ಬವಾದ ಈ ಮಹೋತ್ಸವ, ಸಮ್ಮೇಳನಗಳಿಗೆ ಮೆರುಗನ್ನು ನೀಡಲಿವೆ 75 ವಾಣಿಜ್ಯ ಮಳಿಗೆಗಳು.
* ಸುವ್ಯವಸ್ಥಿತವಾಗಿ ಸಜ್ಜುಗೊಂಡಿರುವ ಅತ್ಯಾಕರ್ಷಕ ಗ್ರ್ಯಾಂಡ್ ಕ್ಯಾಸಲ್ ಸಭಾಂಗಣದ ಒಳಗೇ ಈ ಮಳಿಗೆಗಳು ಇರಲಿದ್ದು ನೆರಳಿನಲ್ಲೇ ಭೇಟಿ ನೀಡಬಹುದಾಗಿದ್ದು ಜ್ಞಾನಾರ್ಜನೆಗೆ, ವ್ಯವಹಾರ ಕೌಶಲ ವೃದ್ಧಿಗೆ ಪೂರಕವಾದೀತು, ಸ್ಪೂರ್ತಿಯಾದೀತು.
* ಆಗಮಿಸುವ ಸಹಸ್ರ ಸಹಸ್ರ ಜನರ ಮುಂದೆ ತಮ್ಮ ಬ್ರಾಂಡ್, ಉತ್ಪನ್ನ, ಸಂಸ್ಥೆ, ಉದ್ಯಮಗಳನ್ನು ಪ್ರಸ್ತುತ ಪಡಿಸಲೂ ಇದು ಅತ್ಯಪೂರ್ವ ಅವಕಾಶವಾಗಿದೆ.
* ಆಸಕ್ತರು ಮಳಿಗೆಗಳನ್ನು ಕಾಯ್ದಿರಿಸಲು ಸಂಚಾಲಕರನ್ನು ಸಂಪರ್ಕಿಸಬಹುದು .
ಸಂಚಾಲಕ : ಶ್ರೀನಿವಾಸ (ತಿಮ್ಸ್ ಹೆಗಡೆ)
ಮೊಬೈಲ್ : 98448 83960
ಮನೆಯ ಮುಂದೆ, ಹೊಸ್ತಿಲ ಮೇಲೆ, ದೇವರ ಮುಂದೆ, ತುಳಸಿ ಕಟ್ಟೆಯ ಮುಂದೆ ರಂಗೋಲಿ ಇದ್ದರೆ ಅದು ಶುಭದ ಸಂಕೇತ. ವೈದಿಕ ಮಂಡಲಗಳ ಗ್ರಾಮ್ಯ ರೂಪವೇ ರಂಗೋಲಿ ಅಥವಾ ರಂಗವಲ್ಲಿ. ಹಿಂದೆಲ್ಲಾ ರಂಗೋಲಿಯಿಲ್ಲದ ಮನೆಗೆ ಸಾಧು ಸಂತರು ಭೇಟಿ ನೀಡುತ್ತಿರಲಿಲ್ಲವಂತೆ. ನಮ್ಮ ಹವ್ಯಕ ಸಂಸ್ಕೃತಿಯಲ್ಲಿ ರಂಗೋಲಿಗೆ ವಿಶೇಷ ಸ್ಥಾನಮಾನವಿದೆ.
ಗೃಹಿಣಿ ಮುಂಜಾವಿನಲ್ಲಿ ಶುದ್ಧವಾಗಿ, ಎಲ್ಲಕ್ಕಿಂತ ಮೊದಲು ಮಾಡುವ ಕೆಲಸವೇ ಮನೆಯ ಮುಂದಿನ ಬಾಗಿಲು ಸಾರಿಸಿ ರಂಗೋಲಿ ಇಡುವುದು. ರಂಗೋಲಿ ಇಟ್ಟ ಅನಂತರ ತುಳಸಿ ಪೂಜೆ ಮಾಡಿಯೇ ಉಳಿದ ಕೆಲಸಗಳಿಗೆ ಕೈ ಹಾಕುವ ಸಂಪ್ರದಾಯ. ಶುಭ ಕಾರ್ಯಗಳಲ್ಲಿ, ಹಬ್ಬ ಹರಿದಿನಗಳಲ್ಲಿ, ಮನೆಯ ಮುಂದೆ ವಿಶೇಷವಾಗಿ ರಂಗೋಲಿ ಹಾಕುವುದೇ ಒಂದು ಸಂಭ್ರಮ. ರಂಗೋಲಿಯನ್ನು, ರಂಗೋಲಿ ಪುಡಿ, ಅಕ್ಕಿ ಹಿಟ್ಟು, ಹೂವು ಮುಂತಾದವುಗಳಿಂದ ಹಾಕಲಾಗುತ್ತದೆ.
ಇದಕ್ಕೆ ಪ್ರಾಂತೀಯತೆಯ ಭೇದವಿಲ್ಲ. ಆಸೇತು ಹಿಮಾಚಲ ಈ ಪರಂಪರೆ ಇದೆ. ನಮ್ಮ ಸಮಾಜದಲ್ಲಿ ಇದು ಅನೂಚಾನವಾಗಿ ಜಾರಿಯಲ್ಲಿ ಇದೆ ಎಂಬುದೂ ಹೆಮ್ಮೆಯ ವಿಷಯ. ಈ ಕಲೆಯನ್ನು ಕರಗತ ಮಾಡಿಕೊಂಡ ಅದೆಷ್ಟೋ ಮಾತೆಯರೂ ಮಹನೀಯರೂ ಮಕ್ಕಳೂ ನಮ್ಮಲ್ಲಿ ಇದ್ದಾರೆ.
ಇಂಥ ಒಂದು ಶಾಸ್ತ್ರೀಯವೂ ಸಾಂಪ್ರದಾಯಿಕವೂ ಗ್ರಾಮೀಣವೂ ಆದ ರಂಗವಲ್ಲಿ ಕಲೆಯ ಪ್ರೋತ್ಸಾಹ ಮತ್ತು ಪ್ರದರ್ಶನದ ದೃಷ್ಟಿಯಿಂದ ಅಮೃತ ಮಹೋತ್ಸವದ ಮಂಗಳ ಮೆರಗಿಗಾಗಿ ಈ ಕಲೆಯ ವೈವಿಧ್ಯದ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಏರ್ಪಡಿಸಿದೆ.
ರಂಗವಲ್ಲಿ ಸ್ಪರ್ಧೆ :
ದಿನಾಂಕ : 28, ಶುಕ್ರವಾರ 2018
ಸಮಯ : ಸಂಜೆ 3 ರಿಂದ 5 ಗಂಟೆ
* ಹುಡಿ, ಹಿಟ್ಟು, ಹೂ, ಎಲೆ ಇತ್ಯಾದಿ ಯಾವುದೇ ಮಾಧ್ಯಮಗಳನ್ನು ಬಳಸಬಹುದು
* ವಿಜೇತರಿಗೆ 10 ಪಾರಿತೋಷಕಗಳು ಇರುತ್ತವೆ.
* ಬಹುಮಾನಗಳ ಒಟ್ಟು ಮೌಲ್ಯ 16,000/-
* ಯೋಗ್ಯ ಸ್ಥಳವನ್ನು ಮಾತ್ರ ಸಮಿತಿಯು ಒದಗಿಸುತ್ತದೆ, ಪರಿಕರಗಳನ್ನು ಸ್ಪರ್ದಾರ್ತಿಗಳೇ ತರಬೇಕು.
ಸಂಚಾಲಕಿ : ಶ್ರೀಮತಿ ಭಾರತಿ ಪ್ರಕಾಶ್
ಮೊಬೈಲ್ : 88670 96393
ಕಲ್ಲಲ್ಲಿ ಕಡೆದ ಗೊಜ್ಜಿನ ರುಚಿನೇ ಬೇರೆ ಎಂಬುದು ಎಲ್ಲ ಕಡೆಗೂ ಕೇಳಿಬರುವ ಮಾತು. ವೈಜ್ಞಾನಿಕ ಸಂಶೋಧನೆಯ ಹೊಸ ಹೊಸ ಉಪಕರಣಗಳು ಬರುವ ಮೊದಲು ನಾವೆಲ್ಲರೂ ಸಾಂಪ್ರದಾಯಿಕವಾದ ಹಲವಾರು ಪರಿಕರಣಗಳನ್ನು ಬಳಸುತ್ತಿದ್ದೆವು. ರುಬ್ಬುಗುಂಡು, ಬೀಸುಗಲ್ಲು, ಕುಟ್ಟಾಣಿ, ಕವಳಸಂಚಿ, ಮದ್ದುಪಂಪು, ಒನಕೆವರಳು ಇತ್ಯಾದಿ ನೂರಾರು ಪ್ರಾಚೀನ ಪರಿಕರಗಳು ನೆನಪಿನ ಹಾಳೆಯಲ್ಲಿ ಮೂಡುತ್ತವೆ. ಇಂಥ ವಸ್ತುಗಳನ್ನು ಮ್ಯೂಸಿಯಂ ಮಾದರಿಯಲ್ಲಿ ಪ್ರದರ್ಶನೀಯನ್ನು ಆಯೋಜಿಸಲಾಗುತ್ತಿದೆ.
* ನಮ್ಮ ಅಪ್ಪಯ್ಯ, ಅಜ್ಜ ಮುತ್ತಜ್ಜರು, ಅಮ್ಮ ಅಜ್ಜಿ ಉಪಯೋಗಿಸುತ್ತಿದ್ದ ನಿತ್ಯೋಪಯೋಗಿ ಉಪರಕರಣಗಳು
* ಅಡುಗೆಮನೆಯಯಲ್ಲಿಯ ಒಲೆ, ಕಡೆಗೋಲು, ಕೆರೆಮಣೆ, ವಿವಿಧಸೌಟು ಚಮಚಗಳು, ಬೀಸುಗಲ್ಲು
* ತೋಟಗಾರಿಕೆಯಲ್ಲಿಯ ಚೊಬ್ಬೆ, ಚೂಳಿ, ಕಲ್ಲಿ, ಹೆಡಗೆ, ಪಂಪು, ದೋಟಿ, ಕತ್ತಿಗಳು, ಉಡುಚಾಪೆ, ಕಡಕಲಮಣೆ, ಕತ್ತಿಕೊಕ್ಕೆ, ಇತ್ಯಾದಿಗಳು
* ಕವಳ ಬಟ್ಟಲ ಪರಿಕರಗಳು, ಕುಟ್ಟುಗುಂಡು,
* ಚಿಮಣಿ ಬುಡ್ಡಿ, ಲಾಟಿಣ್, ಗ್ಯಾಸ್ ಲೈಟ್ ಇತ್ಯಾದಿಗಳು
– ಇತ್ಯಾದಿ ಇನ್ನೂ ಅನೇಕ ವಸ್ತುಗಳನ್ನು ತಂದು ಇಟ್ಟು ಪ್ರದರ್ಶಿಸಲು ಅವಕಾಶವಿದೆ.
– ಯಾವುದೇ ರೀತಿಯ ಸಾರಿಗೆ ಸೌಲಭ್ಯವನ್ನು ನೀವೇ ಭರಿಸಬೇಕು, ಮಹಾಸಭೆಯಿಂದ ವ್ಯವಸ್ಥೆ ಇಲ್ಲ.
– ಪ್ರದರ್ಶನಿಯ ಸ್ಥಳ ಮತ್ತು ವ್ಯವಸ್ಥೆಯನ್ನು ಸಮಿತಿಯು ನೋಡಿಕೊಳ್ಳಲಿದೆ.
– ಪ್ರದರ್ಶನಿಯು ಸ್ಪರ್ಧಾ ರೂಪದಲ್ಲಿ ಇರಲಿದ್ದು, ವಿಶೇಷ ವಸ್ತುಗಳನ್ನು ಯೋಜಿಸಿದ್ದಕ್ಕೆ ಪಾರಿತೋಷಿಕವಿದೆ.
ಒಟ್ಟು ಬಹುಮಾನಗಳು 10. ಒಟ್ಟು ಮೌಲ್ಯ ರೂ. 30,000/-
ಸಂಚಾಲಕ : ಶ್ರೀ ಅಮರ ಕಾನಗೋಡು
ಮೊಬೈಲ್ : 94483 37671
ಮನುಷ್ಯನು ತಿನ್ನುವುದಕ್ಕಾಗಿ ಬದುಕುವುದಿಲ್ಲ, ಬದುಕುವುದಕ್ಕಾಗಿ ತಿನ್ನುತ್ತಾನೆ. ಆ ಬದುಕನ್ನು ಚೆನ್ನಾಗಿ ನಡೆಸಲು ಆರೋಗ್ಯ ಚೆನ್ನಾಗಿರಬೇಕು. ಒಳ್ಳೆಯ ಆರೋಗ್ಯಕ್ಕೆ ಒಳ್ಳಯ ಆಹಾರಬೇಕು. ಹವ್ಯಕರ ಆಹಾರಕ್ರಮ ವೈಜ್ಞಾನಿಕವಾದದ್ದು ಎಂಬುದು ಶೋಧಫಲ. ಹವ್ಯಕ ಆಹಾರ ಪದಾರ್ಥಗಳು ಕಾಲಕ್ಕೆ ತಕ್ಕಂತೆ ಆರೋಗ್ಯ ವರ್ಧಕ. ಇಂಥ ಆಹಾರ ವೈವಿಧ್ಯವನ್ನು ಲೋಕಕ್ಕೆ ತೋರಿಸುವ ತಿನಿಸುವ ಕಲಾಪವೇ ಹವ್ಯಕ ಪಾಕೋತ್ಸವ.
ಹವ್ಯಕ ಪಾಕ ವೈವಿಧ್ಯ ಮತ್ತು ಭಕ್ಷ್ಯ ಭೋಜ್ಯ ಲೇಹ್ಯ ಚೋಷ್ಯಗಳು:
* ಶಿವಮೊಗ್ಗ, ದಕ್ಷಿಣಕನ್ನಡ ಉತ್ತರಕನ್ನಡ ಪ್ರಾಂತದ ಹಲವು ತಿಂಡಿತಿನಿಸುಗಳು
* ಪತ್ರೊಡೆ, ಕೊಟ್ಟೆಗಡಬು, ಅವಲಕ್ಕಿ, ಪುಂಡಿಗಟ್ಟಿ, ಕೊಟ್ಟಿಗೆ, ಕುಟ್ಟವಲಕ್ಕಿ, ರೊಟ್ಟಿ, ವಡಪೆ,
* ಗೆಣಸಲೆ, ಬೇಳೆ ಹೋಳಿಗೆ, ಸುಕ್ಕಿನುಂಡೆ, ಕೇಸರಿ, ಶಿರಾ, ಜಿಲೇಬಿ, ಅತ್ರಾಸ, ಚಕ್ಕುಲಿ, ಕೋಡುಬಳೆ, ಕಾಯಿ ಹೋಳಿಗೆ, ಸಕ್ಕರೆ ಹೋಳಿಗೆ, ಅಕ್ಕಿ ರೊಟ್ಟಿ.
* ವಿವಿಧ ಸಾರು, ಹುಳಿ, ಪಲ್ಯ, ಕೋಸಂಬರಿ, ತಂಬುಳಿ, ಪಾಯಸಗಳು
* ತಿನಿಸುಗಳ ಜೀವವಿಜ್ಞಾನ ಮಾಹಿತಿಯ ಪ್ರದರ್ಶನ
* ಖರೀದಿಸಿ ತಿನ್ನಲು ಮತ್ತು ಪಾರ್ಸಲ್ ಸೇವೆಗಳು ಲಭ್ಯ.
ಸಂಚಾಲಕರು :
ಪಾಕತಜ್ಞೆ – ಸವಿತಾ ಭಟ್, ಅಡ್ವಾಯಿ
ಮೊಬೈಲ್ : 96630 69391
ಪಾಕಪ್ರವೀಣ – ಮಹೇಶ್ ಹೆಗಡೆ
ಮೊಬೈಲ್ : 94480 80377
ನಿರ್ವಹಣೆ – ಶ್ರೀವತ್ಸ ಮೂಡಗೋಡು
ಮೊಬೈಲ್ : 97310 61567
* ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಹವ್ಯಕರು ಕೈಯಾಡಿಸದ ಕ್ಷೇತ್ರವಿಲ್ಲ! ಪ್ರವೇಶಿಸಿದ ಕ್ಷೇತ್ರದಲ್ಲಿ ಪ್ರಸಿದ್ಧಿಯ ಉತ್ತುಂಗಕ್ಕೇರುವುದೂ ಹವ್ಯಕರಿಗೆ ಕರತಲಾಮಲಕ.
* ಕಿರುತೆರೆ, ಹಿರಿತೆರೆ, ನಾಟಕ ರಂಗದಲ್ಲಿ ಖ್ಯಾತಿವೆತ್ತ ಅನೇಕ ಹವ್ಯಕರಿದ್ದಾರೆ. ಜೀವನದಲ್ಲಿ ಸೆಲೆಬ್ರಿಟಿಗಳಾಗಿ ಇವರೆಲ್ಲ ಮಿಂಚುತ್ತಿರುವುದು ಹವ್ಯಕರಿಗೆ ಖುಷಿ ಕೊಡುವ ವಿಷಯ.
* ಈ ಕಲಾವಿದರೆಲ್ಲರ ಪಾಲ್ಗೊಳ್ಳುವಿಕೆಯಲ್ಲಿ ವೈಶಿಷ್ಟ್ಯಪೂರ್ಣವಾದ ಮನೋರಂಜನೆಯ ಸುಧೆ ಅರಮನೆ ಮೈದಾನದಲ್ಲಿ ಹರಿಯಲಿದೆ!
* ಕಲಾಸ್ವಾದನೆಗೆ ಸಿದ್ಧರಾಗಿ, ಮನಕ್ಕೆ ಮುದನೀಡಿ.
ಸಂಚಾಲಕ : ಬ.ಲ. ಸುರೇಶ್
ಮೊಬೈಲ್ : 94804 90615
ಯಜ್ಞಗಳ ಮಹತಿಯನ್ನು ಸಮಾಜಕ್ಕೆ ತಿಳಿಸಿ ಹೇಳುವ ಪ್ರಯತ್ನವಾಗಿ ಪ್ರಸಿದ್ಧ ರಾಮಕಥಾ ಮಾದರಿಯಲ್ಲಿ ಯಜ್ಞಧಾರಿಣಿ ರಾಮಕಥಾ ಪ್ರಸ್ತುತಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ನಡೆಸಿಕೊಡಲಿದ್ದಾರೆ.
ರಾಮಕಥಾ
* ಪ್ರವಚನ – ಗಾಯನ – ವಾದನ – ಚಿತ್ರ – ರೂಪಕಗಳ ವಿಶಿಷ್ಟ ಸಂಯೋಜನೆ.
* ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳಿಂದ ಪ್ರವಚನಾನುಗ್ರಹ.
* ಮನೋರಂಜನೆಯ ಜೊತೆಗೆ ರಾಮಾಯಣದ ಸಂದೇಶಗಳನ್ನು ಆಬಾಲವೃದ್ಧರ ಮನೆ-ಮನಗಳಿಗೆ ತಲುಪಿಸಲು ‘ರಾಮಕಥಾ’ ಮಾಧ್ಯಮ.
* ಕನ್ನಡದಲ್ಲಷ್ಟೇ ಅಲ್ಲದೇ ರಾಜಸ್ಥಾನ, ಮುಂಬೈ, ಕೊಲ್ಕತ್ತಾಗಳಲ್ಲಿ ಪೂಜ್ಯ ಶ್ರೀಸಂಸ್ಥಾನದವರು ಹಿಂದಿ ಭಾಷೆಯಲ್ಲಿ ಅನುಗ್ರಹಿಸಿದ ರಾಮಕಥಾ ಅಲ್ಲಿನ ಪುರಜನರ ಮನಗೆದ್ದಿತ್ತು.
ಯಜ್ಞಧಾರಿಣಿ
‘ಹವ್ಯೇ ಕವ್ಯೇ ಏ ದಕ್ಷಾಃ ತೇ ಹವ್ಯಕೆರತ್ಯಭಿಧೀಯತೇ’ ಎಂಬಂತೆ ಹವ್ಯ-ಕವ್ಯಗಳಲ್ಲಿ ದಕ್ಷರಾದ ಜನಾಂಗವಾದ ನಮಗೆ ಹವ್ಯಕ ಎಂಬ ಹೆಸರು ಬಂತು. ಹಾಗಾಗಿ ನಮಗೂ ಯಜ್ಞಗಳಿಗೂ ಅವಿನಾಭಾವ ಸಂಬಂಧವಿದೆ. ಐತಿಹಾಸಿಕ ಸಮ್ಮೇಳನದ ಸಮಾರೋಪದ ದಿನದಂದು ಸಂಪನ್ನವಾಗುವ ‘ಯಜ್ಞಧಾರಿಣಿ’ ರಾಮಕಥಾ ಪ್ರಸ್ತುತಿಯು ಯಜ್ಞಗಳ ಮಹತಿಯನ್ನು ಸಾರಿಹೇಳಲಿರುವುದು ವಿಶೇಷವಾಗಿದೆ.
* ಪೂಜ್ಯ ಶ್ರೀಸಂಸ್ಥಾನದವರಿಂದ ಪ್ರವಚನಾನುಗ್ರಹ.
* 75 ಖ್ಯಾತ ಕಲಾವಿದರು ಈ ಕಾರ್ಯಕ್ರಮದ ರೂಪಕ ಹಾಗೂ ಗಾಯನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
* ಕಣ್ಣುಗಳಿಗೆ ಹಬ್ಬವಾಗಿ, ಮನಸ್ಸಿಗೆ ಉಲ್ಲಾಸ ನೀಡುವ ಸಾಧನವಾಗಿ, ಜೀವನಕ್ಕೆ ಸಂದೇಶ ನೀಡುವ ಕಾರ್ಯಕ್ರಮ.
ಐತಿಹಾಸಿಕ ದ್ವಿತೀಯ ವಿಶ್ವಹವ್ಯಕ ಸಮ್ಮೇಳನದ ಸಮಾರೋಪದ ದಿನದಂದು ಸಂಜೆ 6 ರಿಂದ 8.30 ವರೆಗೆ ಈ ರಾಮಕಥಾ ಪ್ರಸ್ತುತಿ ನಡೆಯಲಿದ್ದು, ಐತಿಹಾಸಿಕ ಕಾರ್ಯಕ್ರಮದ ಕಲಶಪ್ರಯವಾದ ಸಮಾರೋಪ ದಿನದ ಕಿರೀಟ ಸದೃಶ ಕಾರ್ಯಕ್ರಮವಾಗಿ ‘ಯಜ್ಞಧಾರಿಣಿ’ ಮೂಡಿಬರಲಿದೆ.
ಸಂಚಾಲಕರು : ಶಾಂತರಾಮ ಹಿರೇಮನೆ
ಮೊಬೈಲ್ : 86606 37911
ನಾರಾಯಣ ಖಂಡಿಕ
ಮೊಬೈಲ್ : 94802 57246
ಶ್ರೀಮದ್ಭಗವದ್ಗೀತೆಯು ನಮ್ಮೆಲ್ಲರಿಗೂ ಪೂಜನೀಯ ಗ್ರಂಥವಾಗಿದೆ. ಶ್ರೀಕೃಷ್ಣನಿಂದ ಅನುಗ್ರಹೀತವಾದ ಗೀತೆಯು ಇಹಕ್ಕೂ ಪರಕ್ಕೂ ಉಪಯುಕ್ತವಾದ ಸಂದೇಶವನ್ನು ನೀಡುವ ಅನುಪಮ ಸಾಧನವಾಗಿದ್ದು, ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದ ಉದ್ಘಾಟನಾ ದಿನದಂದು ‘ಸಾಮೂಹಿಕ ಭಗವದ್ಗೀತಾ ಪಠಣ’ ಸಂಪನ್ನವಾಗಲಿದೆ.
ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ತಮ್ಮ ‘ಗೀತಾ ಅಭಿಯಾನ’ದ ಮೂಲಕ ನಾಡಿನಾದ್ಯಂತ ಗೀತೆಯ ಸಂದೇಶವನ್ನು ಭಿತ್ತರಿಸುವ ಉಲ್ಲೇಖಾರ್ಹ ಕಾರ್ಯವನ್ನು ಮಾಡುತ್ತಿದ್ದು, ಭಗವದ್ಗೀತೆಯನ್ನು ಜನಮಾನಸಕ್ಕೆ ತಲುಪಿಸುವ ಕಾರ್ಯದಲ್ಲಿ ಸ್ವರ್ಣವಲ್ಲಿ ಮಠ ನಿರತವಾಗಿದೆ.
ಸ್ವರ್ಣವಲ್ಲಿ ಶ್ರೀಗಳ ಸಾನ್ನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ನಡೆಯುವ ‘ಸಾಮೂಹಿಕ ಭಗವದ್ಗೀತಾ ಪಠಣ’ವು ವಿಶ್ವ ಸಮ್ಮೇಳನದಲ್ಲಿ ವಿಶ್ವ ಕರ್ತನ ಸಂದೇಶವನ್ನು ಭಿತ್ತರಿಸುವ ಕಾರ್ಯಕ್ರಮವಾಗಿ ಮೂಡಿಬರಲಿದೆ.
ಸಂಚಾಲಕಿ : ಶುಭಾ ಹೆಗಡೆ
ಮೊಬೈಲ್ : 99458 84365
* ಹವ್ಯಕರಿಗೂ ಕಲೆಗೂ ಹತ್ತಿರದ ನಂಟು. ವಿಶೇಷವೆಂದರೆ ಪ್ರತಿ ಹವ್ಯಕ ಮನೆಯಲ್ಲಿಯೂ ಒಂದಿಲ್ಲೊಂದು ಕಲಾಪ್ರತಿಭೆ ಇದ್ದೇ ಇರುತ್ತದೆ! ಕಲಾಸಿರಿವಂತಿಕೆಯ ಸಮಾಜ ಹವ್ಯಕವೆಂದರೂ ಉತ್ಪ್ರೇಕ್ಷೆಯಲ್ಲ. ತಮ್ಮದೇ ಆದ ಕಲಾಸಾಧನೆಯ ಮೂಲಕ ಉತ್ತುಂಗಕ್ಕೇರಿದ ಹವ್ಯಕರು ನೂರಾರು!
* ನಾಡಿನಲ್ಲೇ ಹೆಸರಾಂತ ಹವ್ಯಕ ಕಲಾವಿದರನ್ನೆಲ್ಲಾ ಒಂದೇ ವೇದಿಕೆಯಲ್ಲಿ ನೋಡುವ ಭಾಗ್ಯ ಅಮೃತ ಮಹೋತ್ಸವ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದ ಪ್ರಾರಂಭದ ದಿನ ನಮ್ಮೆಲ್ಲರ ಪಾಲಿಗೆ!
* ಮೂರು ಗಂಟೆಗಳ ಸಾಂಸ್ಕೃತಿಕ ರಸಧಾರೆ!
* ಹವ್ಯಕ ಶೋಬಾನೆ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ಕನರ್ಾಟಕ ಶಾಸ್ತ್ರೀಯ ಸಂಗೀತ, ಸುಗಮಸಂಗೀತ, ಜಾನಪದ ಗೀತೆ, ಭಕ್ತಿಗೀತೆ, ಭಾವಗೀತೆ, ಭಜನೆ, ಎಲ್ಲವುಗಳ ರಸದೌತಣ!
* ಹತ್ತು ಹಲವು ತಬಲಾ, ಮೃದಂಗ, ವೀಣೆ, ಪಿಟೀಲು, ಹಾರ್ಮೋನಿಯಂ ಮೊದಲಾದ ವಾದ್ಯಗಳು ಜೊತೆಯಾಗಿ ಕಿವಿಗಳಿಗೆ ಹಬ್ಬ!
* ನಾಟ್ಯ, ಅಭಿನಯ ಕಲಾವಿದರೂ ಒಗ್ಗೂಡಿ ಪ್ರದರ್ಶನ ನೀಡುತ್ತಾ ಕಣ್ಣುಗಳಿಗೂ ಹಬ್ಬ!
* ವಿರಳಾತಿವಿರಳವಾಗಿ ನಡೆಯಬಹುದಾದ ವಿಶಿಷ್ಟ ರೀತಿಯಲ್ಲಿ ಪ್ರದರ್ಶನಗೊಳ್ಳಲಿರುವ ಇಂತಹ ಸಂಗೀತ ನಾಟ್ಯ ಕಲಾ ವೈಭವವನ್ನು ನೇರವಾಗಿ ಆಸ್ವಾದಿಸಲು ಯೋಗಬೇಕು!
* ಡಿಸೆಂಬರ್ 28, ಶುಕ್ರವಾರ ಸಂಜೆ 5ರಿಂದ 8ಗಂಟೆಯ ತನಕ.
ಸಂಚಾಲಕರು : ಶ್ರೀ ಉದಯಕೃಷ್ಣ ಜಿ.
ಮೊಬೈಲ್ : 98809 83388
ಕೃಷ್ಣಮೂರ್ತಿ ಹೆಗಡೆ
ಮೊಬೈಲ್ : 94485 05697
* ಯಕ್ಷಗಾನಕ್ಕೂ ಹವ್ಯಕರಿಗೂ ಅವಿನಾಭಾವ ನಂಟು. ಹವ್ಯಕರನ್ನು ಬಿಟ್ಟು ಯಕ್ಷಗಾನವಿಲ್ಲ, ಯಕ್ಷಗಾನವನ್ನು ಬಿಟ್ಟು ಹವ್ಯಕರಿಲ್ಲ!
* ಹವ್ಯಕರ ಕಲೆ ಎಂದರೆ ಯಕ್ಷಗಾನ ಎನಿಸುವಷ್ಟರ ಮಟ್ಟಿಗೆ ಈ ಸಂಬಂಧ ಬೆಳೆದುನಿಂತಿದೆ. ಯಕ್ಷಗಾನದಲ್ಲಿ ತೊಡಗಿಸಿಕೊಂಡ ಹವ್ಯಕರ ಸಂಖ್ಯೆ ಬಲುದೊಡ್ಡದು.
* ಬಡಗುತಿಟ್ಟು, ತೆಂಕುತಿಟ್ಟುಗಳೆಂಬ ಎರಡು ಪ್ರಕಾರಗಳಲ್ಲೂ ಭಾಗವತರಾಗಿ, ಸ್ತ್ರೀಪಾತ್ರಧಾರಿಗಳಾಗಿ, ಪ್ರಧಾನ ವೇಷಧಾರಿಗಳಾಗಿ, ಹಾಸ್ಯಗಾರರ ಪಾತ್ರದಲ್ಲಿ, ಚೆಂಡೆ-ಮದ್ದಳೆ, ಹಾರ್ಮೋನಿಯಂ, ಚಕ್ರತಾಳ ವಾದಕರಾಗಿ ಸುಪ್ರಸಿದ್ಧರಾದ ನೂರಾರು ಕಲಾವಿದರು ಹವ್ಯಕ ಸಮಾಜದ ಹೆಮ್ಮೆ.
* ಹಲವಾರು ಪ್ರಸಂಗಗಳ ವಿಭಿನ್ನ ಹಾಡುಗಳು, ಅನೇಕ ವೇಷಪ್ರಕಾರಗಳ ಯಕ್ಷಗಾನ ನೃತ್ಯವನ್ನು ಒಂದೇ ವೇದಿಕೆಯಲ್ಲಿ ಪ್ರಸ್ತುತ ಪಡಿಸಲಾಗುತ್ತಿದೆ!
* ನಮ್ಮ ಶ್ರೇಷ್ಠ ಯಕ್ಷ ಕಲಾಸಾಧಕರ ಕಂಡು ಕೇಳರಿಯದ ಕಲಾವೈವಿಧ್ಯವನ್ನು ಕಣ್ತುಂಬಿಕೊಳ್ಳುವ ಏಕಮೇವ ಅವಕಾಶ!
* ತೆಂಕುತಿಟ್ಟು, ಬಡಗುತಿಟ್ಟುಗಳ ಹವ್ಯಕ ಸುಪ್ರಸಿದ್ಧ ಕಲಾವಿದರೆಲ್ಲರ ಸಂಗಮ!
* ಆಗಮಿಸಿ, ಆಸ್ವಾದಿಸಿ, ಆನಂದಿಸಿ, ಸಮಾಜದ ಕಲಾವಿದರ ಬಗ್ಗೆ ಹೆಮ್ಮೆಪಡಿ.
* ಡಿಸೆಂಬರ್ 29, ಶನಿವಾರ ಸಂಜೆ 5 ರಿಂದ 8 ಗಂಟೆಯ ತನಕ
ಸಂಚಾಲಕರು : ಗಣಪತಿ ಹೆಗಡೆ, ತೋಟಿಮನೆ
ಮೊಬೈಲ್ : 94489 31362
ಎಸ್. ಎನ್. ಪಂಜಾಜೆ
ಮೊಬೈಲ್ : 9448447512
ಬಂಧುಗಳ ಮನೆ * ಹವ್ಯಕ ಬೆಂಗಳೂರಿಗರ ಮನೆ * ಮಹಾಸಭೆಯ ಉಚಿತ ವಸತಿ ವ್ಯವಸ್ಥೆ
ಹವ್ಯಕರು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಿ ನೆಲೆಸಿದ್ದಾರೆ ಎಂಬ ಪ್ರಶ್ನೆ ಎದುರಾದರೆ ನಿಸ್ಸಂಶಯವಾಗಿ ನಮ್ಮ ಉತ್ತರ ಬೆಂಗಳೂರು ಎಂದಾಗಿರುತ್ತದೆ. ಹೌದು ನಮ್ಮ ಅನೇಕ ಬಂಧು ಬಾಂಧವರು ಬೆಂಗಳೂರಿನಲ್ಲಿ ಇದ್ದಾರೆ, ಐತಿಹಾಸಿಕ ಅಮೃತ ಮಹೋತ್ಸವ ಮತ್ತು ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ಆಗಮಿಸಿದಾಗ ನಾವು ನಮ್ಮ ಬಂಧುಗಳ ಮನೆಯಲ್ಲಿ ಉಳಿದುಕೊಂಡು, ಸಮ್ಮೇಳನವನ್ನು ಆಸ್ವಾದಿಸಬಹುದಾಗಿದೆ.
* ಡಿಸೆಂಬರ್ ಅಂತ್ಯದಲ್ಲಿ ಸಾಮಾನ್ಯವಾಗಿ ಕಚೇರಿಗಳಿಗೂ ಬಿಡುವಿರಲಿದ್ದು, ಮಕ್ಕಳಿಗೂ ರಜೆ ಇರಲಿದೆ.
* ಅಭೂತಪೂರ್ವ ಸಮ್ಮೇಳನದಲ್ಲಿ ಭಾಗವಹಿಸುವುದರ ಜೊತೆಗೆ, ಬಂಧುಗಳೊಡನೆ ಸಮಯ ಕಳೆದಂತೆಯೂ ಆಗುತ್ತದೆ.
* ಊರಿನಲ್ಲಿರುವವರಿಗೆ ಬಂಧುಗಳನ್ನು ಭೇಟಿಯಾಗುವ ಅವಕಾಶವಾದರೆ, ಬೆಂಗಳೂರಿಗರಿಗೆ ಅತಿಥಿ ಸತ್ಕಾರಕ್ಕೊಂದು ಅವಕಾಶ.
ಬೆಂಗಳೂರಿಗರಿಗೆ ಮನವಿ : ಬಂಧುಗಳು ಕುಟುಂಬದವರು ಹಬ್ಬ ಹರಿದಿನದಲ್ಲಿ ಒಟ್ಟುಸೇರುವಂತೆ, ಸಮಾಜದ ಹಬ್ಬವಾದ ಐತಿಹಾಸಿಕ ಸಮ್ಮೇಳನದಲ್ಲಿ ಒಟ್ಟು ಸೇರಿ ಸಂಭ್ರಮಿಸಲು, ಆನಂದಿಸಲು ಉತ್ತಮ ಅವಕಾಶವಾಗಿದೆ. ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯುತ್ತಿರುವುದರಿಂದ ಊರಿನವರಿಗೆ ತಮ್ಮ ಮನೆಗೆ ಆಗಮಿಸುವಂತೆ ಕರೆನೀಡಿ, ಅತಿಥಿ ಸತ್ಕಾರಮಾಡುವ ಜವಾಬ್ದಾರಿ ಬೆಂಗಳೂರಿನ ಹವ್ಯಕರಿಗೆ ಇದೆ ಎಂದರೆ ತಪ್ಪಾಗಲಾರದೇನೋ!
* ನಿಮ್ಮ ಬಂಧುಬಳಗವನ್ನು ನಿಮ್ಮ ಮನೆಗೆ ಆಹ್ವಾನಿಸಿ, ಅವರನ್ನು ಸಮ್ಮೇಳನಕ್ಕೆ ಕರೆತನ್ನಿ.
* ಮನೆಯಲ್ಲಿ ವಸತಿಗೆ ಸ್ಥಳಾವಕಾಶವಿದಯೇ? 2,4, 5 ಜನರ ವಸತಿಗೆ ನಿಮ್ಮಲ್ಲಿ ಅವಕಾಶ ಸಿಗಬಹುದೆ? ಹಾಗಿದ್ದರೆ ತಡಮಾಡಬೇಡಿ ; ನಮ್ಮ ಸಂಚಾಲಕರಿಗೆ ತಿಳಿಸಿ. ನಾವು ನಿಮಗೆ ಅತಿಥಿ ಸತ್ಕಾರಕ್ಕೆ ಅವಕಾಶ ಕಲ್ಪಿಸಿಕೊಡುತ್ತೇವೆ.
ಮಹಾಸಭೆಯಿಂದ ಸೀಮಿತ ಉಚಿತ ವಸತಿ
ಸಮ್ಮೇಳನಕ್ಕೆ ಆಗಮಿಸುವ ಹವ್ಯಕ ಬಾಂಧವರಿಗೆ ಮಹಾಸಭೆಯಿಂದಲೂ ಉಚಿತ ರೀತಿಯ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ದೂರದೂರಿನಿಂದ ಆಗಮಿಸುವವರಿಗೆ ಬೆಂಗಳೂರಿನಲ್ಲಿ ತಂಗುವ ವ್ಯವಸ್ಥೆ ಇರಲಿದೆ. ವಿವರಗಳಿಗಾಗಿ ವಸತಿ ಸಂಚಾಲಕರನ್ನು ಮುಂಚಿತವಾಗಿ ಸಂಪರ್ಕಿಸಿ .
ಸಂಚಾಲಕರು : ಮನು ಪ್ರಭಾಕರ
ಮೊಬೈಲ್ : 99863 31039
ರಾಮಮೂರ್ತಿ ಕೆ.ಬಿ.
ಮೊಬೈಲ್ : 96201 92192
ಇಕಬಾನ ಎಂದರೆ ‘ತಾಜಾ ಹೂವುಗಳು’ ಇದು ಹೂ ಜೋಡಿಸುವ ಜಪಾನಿನ ಕಲೆ. ಸುಮಾರು 6ನೇ ಶತಮಾನದಿಂದ ಆರಂಭವಾಗಿದ್ದು, ಇತ್ತೀಚೆಗೆ ತುಂಬಾ ಜನಪ್ರಿಯ ಕಲೆಯಾಗಿದೆ. ಇದರಲ್ಲಿ ಹೂವುಗಳ ಆಕಾರ, ಬಣ್ಣ, ಗಾತ್ರಗಳನ್ನು ಗಮನಿಸಿ ವೈವಿಧ್ಯಮಯವಾಗಿ ಜೋಡಿಸಲಾಗುವುದು. ಈ ಹೂ ಜೋಡಣೆಯನ್ನು ಮಾಡುವಾಗ ಕೆಲವು ನಿಯಮಗಳನ್ನು ಪಾಲಿಸಲಾಗುವುದು. ನಾನಾ ಬಗೆಯ ಉಪಕರಣಗಳನ್ನು ಹಿನ್ನೆಲೆಯಾಗಿ ಬಳಸಿಕೊಂಡು ಅದ್ಭುತವಾದ ಹೂಕುಂಡ (ಇಕಬಾನ)ವನ್ನು ರೂಪಿಸಲಾಗುವುದು. ಹೂ ಜೋಡಣೆಗೆ ವಿಶೇಷ ಹೆಸರನ್ನು ಅರ್ಥಪೂರ್ಣವಾಗಿ ನೀಡಲಾಗುವುದು.
* ಪಕ್ಕಾ ತಾಜಾ – ಹೂವಿನ ಜೋಡಣೆ
* ಅಹ… ಸುಗಂಧ … ನಾಸಿಕಾಸ್ವಾದನೆಗೆ ಹಬ್ಬ.
* ಕಣ್ಣಿಗೆ ಆನಂದ, ಮನಸ್ಸಿಗೆ ಮಧುರ ಭಾವ ಅಹ್ಲಾದ, ಮನೋಲ್ಲಾಸ ಇನ್ನೆಲ್ಲಿ ಸಿಕ್ಕೀತು?
ಮರೆಯದೆ ಬನ್ನಿ, ಮನತುಂಬಿಕೊಳ್ಳಿ
ಒಟ್ಟು ಬಹುಮಾನಗಳು 10. ಒಟ್ಟು ಮೌಲ್ಯ ರೂ. 16,000/-
ಸಂಚಾಲಕ : ಡಾ| ಮಮತಾ ಜೋಶಿ
ಮೊಬೈಲ್ : 99457 44833
ಆದರ ಆಥಿತ್ಯಗಳಿಗೆ ಹೆಸರಾದವರು ಹವ್ಯಕರು. ಕರ್ನಾಟಕದ ಮಲೆನಾಡು, ಕರಾವಳಿಯಲ್ಲಿ ನೆಲೆನಿಂತಿರುವ ಹವ್ಯಕರ ಮೂಲ ಮನೆಗಳೆಲ್ಲಾ ಸತ್ಕಾರಗಳಿಗೂ, ಸತ್ಕಾರ್ಯಗಳಿಗೂ ಬಲು ಪ್ರಖ್ಯಾತಿಯನ್ನು ಪಡೆದಿರುವುದಂತೂ ದಿಟ.
ಅಮೃತ ಮಹೋತ್ಸವ ಹಾಗೂ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನಗಳಿಗೆ ಆಗಮಿಸುವ ಸಹಸ್ರಾರು ಹವ್ಯಕ ಪ್ರತಿನಿಧಿಗಳಿಗೆ ಮಾತ್ರವಲ್ಲದೆ ನೋಡಲು ಆಗಮಿಸುವ ಎಲ್ಲರಿಗೂ ನೀರು-ಬೆಲ್ಲ, ಮಜ್ಜಿಗೆ ನೀರನ್ನು ನೀಡಿ ಮೂರು ದಿನವೂ ಬರಮಾಡಿಕೊಳ್ಳಬೇಕೆಂಬುದು ಮಹಾಸಭೆಯ ಆಶಯ.
ಇದಕ್ಕಾಗಿ ಬೆಂಗಳೂರಿನಲ್ಲಿರುವ ಹವ್ಯಕರು ಮೂರ್ನಾಲ್ಕು ದಿನ ತಮ್ಮಿಂದಾದಷ್ಟು ಸಂಗ್ರಹಿಸಿ ದಪ್ಪಗಿರುವ ಮಜ್ಜಿಗೆಯನ್ನು ತಂದುಕೊಟ್ಟರೆ ಪುಣ್ಯಪ್ರದವಾಗುತ್ತದೆ.
ಎಷ್ಟು ಲೀಟರ್ ಮಜ್ಜಿಗೆ ತಂದು ಕೊಡಬಹುದೆಂದು ಸಂಚಾಲಕರಿಗೆ ಮುಂಚಿತವಾಗಿ ತಿಳಿಸಿದರೆ ಉಚಿತ ಸೇವಗೆ ಸುಲಭವಾಗುತ್ತದೆ. ಅಳಿಲು ಸೇವೆಗೆ ಉಪಕ್ರಮಿಸೋಣ. ಆದರ್ಶತೆ ಮೆರೆಯೋಣ.
ಸಂಚಾಲಕ : ನಾರಾಯಣ ಭಟ್ಟ, ಬಡಜ
ಮೊಬೈಲ್ ನಂಬರ್: 99009 03656